alex Certify
ಕನ್ನಡ ದುನಿಯಾ       Mobile App
       

Kannada Duniya

ಓ.ಟಿ.ಯಲ್ಲೇ ನರ್ಸ್ ಜೊತೆ ಕುಣಿದು ಕುಪ್ಪಳಿಸಿದ ವೈದ್ಯ

surgeon-and-nurse-dance-over-patient-mid-operation‘ವೈದ್ಯೋ ನಾರಾಯಣೋ ಹರಿ’ ಎಂದು ಜೀವ ಕಾಪಾಡುವ ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಮಾನವೀಯತೆ ಮರೆತು ರಾಕ್ಷಸನಂತೆ ವರ್ತಿಸಿದ್ದಾನೆ. ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಟೇಬಲ್ ಮೇಲೆ ಮಲಗಿದ್ದ ರೋಗಿಯ ಮುಂದೆಯೇ ನರ್ಸ್ ಜೊತೆ ಈ ವೈದ್ಯ ಕುಣಿದು ಕುಪ್ಪಳಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಘಟನೆ ಕೊಲಂಬಿಯಾದಲ್ಲಿ ನಡೆದಿದ್ದು, ವೈದ್ಯ ಡೇವಿಡ್ ಮಜನಾ ಎಂಬಾತ ರೋಗಿಯೊಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಲು ಓಟಿಗೆ ತೆರಳಿದ್ದಾನೆ. ಆತನಿಗೆ ನರ್ಸ್ ಅಂಜೆಲೀಕಾ ಮೆಜಿಯಾ ಸಾಥ್ ನೀಡಿದ್ದಾಳೆ. ಶಸ್ತ್ರ ಚಿಕಿತ್ಸೆ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಇಬ್ಬರಿಗೂ ಅದೇನಾಯಿತೋ ಏನೋ ಶಸ್ತ್ರ ಚಿಕಿತ್ಸೆ ಮಾಡುವ ನಡುವೆಯೇ ಡ್ಯಾನ್ಸ್ ಶುರು ಮಾಡಿದ್ದಾರೆ.

ಇವರಿಬ್ಬರ ಈ ಹುಚ್ಚಾಟವನ್ನು ಕಂಡು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಂಬಂಧಪಟ್ಟವರು, ಇಬ್ಬರು ತಮ್ಮ ವೃತ್ತಿಯ ಘನತೆಯನ್ನು ಮರೆತು ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ. ಅವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...