alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದಿಂದ ಹುಡುಗಿಯನ್ನು ಕಾಪಾಡಿದೆ ದೆವ್ವ…!?

ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯವೊಂದು ನಿಜಕ್ಕೂ ಭಯ ಹುಟ್ಟಿಸುವಂತಿದೆ. ಆ ದೃಶ್ಯದಲ್ಲಿರುವವರು ಮನುಷ್ಯನಾ ಅಥವಾ ದೆವ್ವವಿರಬಹುದಾ ಅನ್ನೋದೇ ಎಲ್ಲರನ್ನೂ ಕಾಡುತ್ತಿರುವ ಗೊಂದಲ. ರಾತ್ರಿ ಹುಡುಗಿಯೊಬ್ಳು ರಸ್ತೆ ದಾಟುತ್ತಿದ್ಲು. ಎರಡು ಕಾರುಗಳು ಶರವೇಗದಲ್ಲಿ ಬರ್ತಿರೋದನ್ನು ಮೊದಲು ಆಕೆ ಗಮನಿಸಿರಲಿಲ್ಲ.

ಒಂದು ಕಾರಿನಿಂದ ತಪ್ಪಿಸಿಕೊಂಡು ಮುಂದೆ ಬರುವಷ್ಟರಲ್ಲಿ ಇನ್ನೊಂದು ಕಾರು ನುಗ್ಗಿ ಬಂದಿತ್ತು. ಇನ್ನೇನು ಹುಡುಗಿ ಕಾರಿನಡಿ ಸಿಲುಕಿ ಅಪ್ಪಚ್ಚಿಯಾಗ್ತಾಳೆ ಎಂದುಕೊಳ್ಳುವಷ್ಟರಲ್ಲಿ ಪವಾಡವೊಂದು ನಡೆದಿತ್ತು. ಕಣ್ಮುಚ್ಚಿ ತೆರೆಯುವುದರಲ್ಲಿ ಯಾರೋ ಹುಡುಗಿಯನ್ನು ಎತ್ತಿಕೊಂಡು ಹೋಗಿ ರಸ್ತೆಯ ಇನ್ನೊಂದು ಬದಿಯಲ್ಲಿ ಬಿಟ್ಟಿದ್ದಾರೆ.

ತನಗೆ ಸಹಾಯ ಮಾಡಿದವರು ಯಾರು ಅನ್ನೋದನ್ನು ನೋಡಬೇಕು ಎಂದುಕೊಳ್ಳುವಷ್ಟರಲ್ಲಿ ಆ ಆಕೃತಿ ಅಲ್ಲಿರಲಿಲ್ಲ, ಮಾಯವಾಗಿಬಿಟ್ಟಿತ್ತು. ಹುಡುಗಿಗೆ ಏನಾದ್ರೂ ಅಪಾಯವಾಗಿದ್ಯಾ ಎಂದು ನೋಡಲು ಕಾರಿನ ಚಾಲಕ ಕೆಳಗಿಳಿದು ಬಂದಿದ್ದ. ಅವನಿಗೆ ಕೂಡ ಅವಳು ಸೇಫ್ ಆಗಿರೋದನ್ನು ನೋಡಿ ಅಚ್ಚರಿ.

ಅವಳನ್ನು ರಕ್ಷಣೆ ಮಾಡಿದವರು ಯಾರು? ಮನುಷ್ಯರಾ ಅಥವಾ ದೆವ್ವನಾ? ಯಾರಾದ್ರೂ ಈ ವಿಡಿಯೋವನ್ನು ಎಡಿಟ್ ಮಾಡಿರಬಹುದಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಈ ವಿಡಿಯೋ ಅಸಲಿಯೋ ನಕಲಿಯೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...