alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರ್ ಪಿಚ್ಚೈ ಸಂಬಳ ಕೇಳಿದ್ರೇ ದಂಗಾಗ್ತೀರಿ

THAVD_SUNDAR_PICHA_2506014f

ಸ್ಯಾನ್ ಫ್ರಾನ್ಸಿಸ್ಕೋ: ಕೈತುಂಬ ಸಂಬಳ, ವಿದೇಶದಲ್ಲಿ ಉದ್ಯೋಗ ಇರಬೇಕೆಂದು ಈಗಿನ ಯುವಜನತೆಯ ಸಹಜವಾದ ಆಸೆಯಾಗಿರುತ್ತದೆ. ಭಾರತದಲ್ಲಿನ ಪ್ರತಿಭಾನ್ವಿತ ಪದವೀಧರರಿಗೆ ವಿದೇಶದ ಪ್ರಮುಖ ಕಂಪನಿಗಳು ಕೈ ಬೀಸಿ ಕರೆಯುತ್ತವೆ. ಅದರಲ್ಲಿಯೂ ಐಐಟಿ ಪದವೀಧರರಿಗೆ ಬೇಡಿಕೆ ಜಾಸ್ತಿ ಇರುತ್ತದೆ.

ಇದೆಲ್ಲಾ ಇರಲಿ, ಗೂಗಲ್ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸುಂದರ್ ಪಿಚ್ಚೈ ಅವರಿಗೆ ನೀಡುತ್ತಿರುವ ವೇತನ ಎಷ್ಡಿದೆ ಎಂಬುದನ್ನು ನೋಡಿ. ಸುಂದರ್ ಪಿಚ್ಚೈ ಅಮೆರಿಕದಲ್ಲಿಯೇ ಅತಿ ಹೆಚ್ಚು ವೇತನ ಪ್ಯಾಕೇಜ್ ಪಡೆಯುತ್ತಿರುವವರ ಸಾಲಿನಲ್ಲಿ ಮೊದಲಿಗರಾಗಿದ್ದಾರೆ. ಅವರಿಗೆ 19.9 ಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ನೀಡಲಾಗಿದೆ. ಇಂಟರ್ ನೆಟ್ ಸರ್ಚ್ ಇಂಜಿನ್ ಗೂಗಲ್ ಪ್ರವರ್ತಕ ಕಂಪನಿಯಾದ ಅಲ್ಫಬೆಟ್ ಕಂಪನಿ ಸುಂದರ್ ಅವರಿಗೆ ಷೇರುಗಳನ್ನು ನೀಡಿದೆ.

ಅಲ್ಪಬೆಟ್ ಕಂಪನಿ ಸುಂದರ್ ಗೆ 273,328 ಷೇರು ನೀಡಿದ್ದು, ಇದರ ಮಾರುಕಟ್ಟೆ ಬೆಲೆ 19.9 ಕೋಟಿ ಡಾಲರ್ ಆಗಿದೆ. ಅಮೆರಿಕ ನಾಗರೀಕರ ಸರಾಸರಿ ನಿವ್ವಳ ಸಂಪತ್ತಿಗೆ ಹೋಲಿಸಿದಾಗ 14,440 ರಷ್ಟು ಜಾಸ್ತಿಯಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷ ಗೂಗಲ್ ಸಿಇಓ ಆಗಿ ಸುಂದರ್ ಪಿಚ್ಚೈ ಅಧಿಕಾರ ವಹಿಸಿಕೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...