alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದ ಮೊದಲ ಸೂರ್ಯಗ್ರಹಣ ಗೋಚರ

surya

ಈ ವರ್ಷದ ಮೊದಲ ಸಂಪೂರ್ಣ ಸೂರ್ಯಗ್ರಹಣ ಇಂದು ಬೆಳಿಗ್ಗೆ ಸಂಭವಿಸಿದ್ದು, ಬಾನಂಗಳದ ಕೌತುಕವನ್ನು ಜನ ಕಣ್ತುಂಬಿಕೊಂಡರು. ಕೆಲವರು ಮನೆಯಿಂದ ಹೊರಬಾರದೇ ಒಳಗೆ ಉಳಿದರೆ, ಮತ್ತೆ ಕೆಲವರು ಸೌರವ್ಯೂಹದ ಚಮತ್ಕಾರವನ್ನು ಎಕ್ಸ್ ರೇ ಕಾಪಿ ಹಿಡಿದು ನೋಡಿದರು.

ವಿಶ್ವದ ವಿವಿಧ ಕಡೆಗಳಲ್ಲಿ ಗೋಚರವಾದ ಸೂರ್ಯಗ್ರಹಣ ಜನರನ್ನು ಚಕಿತಗೊಳಿಸಿತು. ಭಾರತದಲ್ಲಿ ಈಶಾನ್ಯ ರಾಜ್ಯ ನಾಗಾಲ್ಯಾಂಡ್ ನಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಗ್ರಹಣ ಗೋಚರಿಸಿತು. ಬೆಂಗಳೂರಿನಲ್ಲಿ ಬೆಳಿಗ್ಗೆ 6.30ಕ್ಕೆ ಗ್ರಹಣದ ದೃಶ್ಯ ಕಂಡಿತು. ಸೂರ್ಯನ ಒಂದು ಭಾಗ ಮರೆಯಾಗಿತ್ತು. ವಿಶ್ವದ 13 ದೇಶಗಳಲ್ಲಿ ಸೌರವ್ಯೂಹದ ಕೌತುಕ ಕಾಣಿಸಿದೆ. ಇಂಡೋನೇಷ್ಯಾ, ಫಿಲಿಪೈನ್ಸ್ ಮೊದಲಾದ ದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ಕಾಣಿಸಿದರೆ, ಮತ್ತೆ ಕೆಲವು ರಾಷ್ಟ್ರಗಳಲ್ಲಿ ಸ್ವಲ್ಪ ಭಾಗ ಗೋಚರಿಸಿದೆ.

ಸೂರ್ಯಗ್ರಹಣ, ಚಂದ್ರಗ್ರಹಣ ಸೌರವ್ಯೂಹದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಪ್ರಕ್ರಿಯೆ ಎಂದು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಎಂದರೆ ಸಂಕಷ್ಟದ ಕಾಲ ಎನ್ನಲಾಗುತ್ತದೆ. ಹಾಗಾಗಿ ದೇವಾಲಯಗಳಲ್ಲಿ ಗ್ರಹಣದ ಸಂದರ್ಭದಲ್ಲಿ ದರ್ಶನ ನಿಲ್ಲಿಸಿ, ಶುದ್ಧೀಕರಣ ಕಾರ್ಯಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...