alex Certify
ಕನ್ನಡ ದುನಿಯಾ       Mobile App
       

Kannada Duniya

ಮನುಷ್ಯರ ‘ಆಯಸ್ಸು’ ಕುರಿತಂತೆ ಇಲ್ಲಿದೆ ಕುತೂಹಲಕಾರಿ ಸಂಗತಿ

FILE PHOTO: Elderly residents exercise on the island of Yeonpyeong, which lies in the Yellow Sea, South Korea, April 9, 2014. REUTERS/Damir Sagolj/File Photo

ಆಧುನಿಕ ಜೀವನ ಶೈಲಿ, ಆಹಾರ ಮೊದಲಾದ ಕಾರಣದಿಂದ ಇತ್ತೀಚೆಗೆ ಆಯಸ್ಸು ಕಡಿಮೆಯಾಗುತ್ತಿದೆ ಎಂಬ ಮಾತುಗಳು ಆಗಾಗ ಕೇಳಿ ಬರುತ್ತವೆ. ಆದರೆ, ಇದಕ್ಕೆ ವಿರುದ್ಧವಾರ ಸಂಗತಿ ಇಲ್ಲಿದೆ. ಕೆಲವೇ ವರ್ಷಗಳಲ್ಲಿ ನಿಮ್ಮ ಆಯಸ್ಸು ಹೆಚ್ಚಾಗಲಿದೆ.

ಮನುಷ್ಯನ ಜೀವಿತಾವಧಿ ಶೀಘ್ರದಲ್ಲೇ ಹೆಚ್ಚಾಗಲಿದೆ. 20 ನೇ ಶತಮಾನದ ಆರಂಭದಲ್ಲಿನ ಲೆಕ್ಕಾಚಾರವನ್ನೆಲ್ಲಾ ಉಲ್ಟಾ ಮಾಡುವಂತೆ, 2030 ರ ವೇಳೆಗೆ ಅನೇಕ ದೇಶಗಳ ಜನ ಆಯಸ್ಸು 90 ವರ್ಷಕ್ಕೆ ಏರಿಕೆಯಾಗಲಿದೆ.

ಇದೇ ವೇಳೆ ಅಮೆರಿಕ ದೇಶದ ಜನ ಜೀವಿತಾವಧಿ ಕಡಿಮೆಯಾಗಲಿದೆ. ಅಭಿವೃದ್ಧಿಯಾಗಿರುವ ದೇಶಗಳಿಗೆ ಹೋಲಿಕೆ ಮಾಡಿದಾಗ, ದಕ್ಷಿಣ ಕೊರಿಯಾದ ಮಹಿಳೆಯರ ಆಯಸ್ಸು 90 ವರ್ಷಕ್ಕೆ ಏರಿಕೆಯಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಹೊಸ ವೈದ್ಯಕೀಯ ಜ್ಞಾನ, ತಂತ್ರಜ್ಞಾನ, ಕಡಿಮೆ ಸ್ಮೋಕಿಂಗ್, ಬಾಲ್ಯದಲ್ಲಿ ಉತ್ತಮ ಆರೈಕೆ, ಉತ್ತಮವಾದ ಆರೋಗ್ಯ, ಕಡಿಮೆ ರಕ್ತದೊತ್ತಡ ಇವುಗಳಿಂದ ದಕ್ಷಿಣ ಕೊರಿಯಾ ಜನರ ಆಯಸ್ಸು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...