alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಸೇವಿಸಿದ ಪುರುಷರ ಮನೋಸ್ಥಿತಿ ಕುರಿತು ಹೊರ ಬಿದ್ದಿದೆ ಈ ಮಾಹಿತಿ

ಆಲ್ಕೋಹಾಲ್ ಸೇವಿಸಿದ ಗಂಡಸರು ಮಹಿಳೆಯರನ್ನು ಲೈಂಗಿಕ ವಸ್ತುವಿನಂತೆ ನೋಡುತ್ತಾರೆಂಬುದು ನೂತನ ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಹೌದು….ಸ್ಪಿಂಗರ್ಸ್ ಅಧ್ಯಯನದ ಪ್ರಕಾರ ಆಲ್ಕೋಹಾಲ್ ನಿಂದ ಪ್ರಭಾವಿತರಾದ ಗಂಡಸರಿಗೆ ಮಹಿಳೆ ಲೈಂಗಿಕ ವಸ್ತುವಿನಂತೆ ಕಾಣಿಸುತ್ತಾಳೆ. ಈ ಅಧ್ಯಯನಲ್ಲಿ ಸುಮಾರು 20 ವರ್ಷ ವಯಸ್ಸಿನ 49 ಮಂದಿ ಗಂಡಸರನ್ನು ಬಳಸಿಕೊಳ್ಳಲಾಗಿದೆ.

ಅದರಲ್ಲಿ 29 ಜನರಿಗೆ ಆಲ್ಕೋಹಾಲ್ ನೀಡಿದ್ದು ಉಳಿದವರಿಗೆ ಸಾಫ್ಟ್ ಡ್ರಿಂಕ್ ಕುಡಿಯಲು ನೀಡಲಾಗಿತ್ತು. ಆಗ ಅವರೆಲ್ಲರಿಗೆ 80 ಸುಂದರ ಮಹಿಳೆಯರ ಪೋಟೋಗಳನ್ನು ಕೊಟ್ಟು ರೇಟಿಂಗ್ ನೀಡಲು ಹೇಳಲಾಗಿತ್ತು.

ಈ ವೇಳೆ ಐ ಟ್ರ್ಯಾಕಿಂಗ್ ಟೆಕ್ನಾಲಜಿಯ ಮುಖಾಂತರ ಆ ಗಂಡಸರೆಲ್ಲ ಪೋಟೋದಲ್ಲಿರುವ ಮಹಿಳೆಯ ಯಾವ ಭಾಗವನ್ನು ನೋಡಿದ್ದಾರೆಂಬುದರ ಬಗ್ಗೆ ಟ್ರ್ಯಾಕ್ ಮಾಡಲಾಗಿತ್ತು. ಇದರಲ್ಲಿ ಬಹುತೇಕ ಗಂಡಸರು ಮಹಿಳೆಯರ ಮುಖಕ್ಕಿಂತ ಬೇರೆ ಭಾಗಗಳನ್ನು ನೋಡಿ ರೇಟಿಂಗ್ ನೀಡಿದ್ದು ಬಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...