alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಹತ್ಯೆಯ ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳು, ಶಿಕ್ಷಕರಿಗೆ ಸಂಕಷ್ಟ

skit

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಯನ್ನು ಚಿತ್ರಿಸುವ ವಿಡಂಬನಾ ನಾಟಕ ಪ್ರದರ್ಶಿಸಿದ ತಪ್ಪಿಗೆ ಸ್ಯಾನ್ ಅಂಟೊನಿಯೊ ಹೈಸ್ಕೂಲ್ ನ ಇಬ್ಬರು 10ನೇ ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಾಗ್ದಂಡನೆ ವಿಧಿಸಲಾಗಿದೆ. ಮಾರ್ಷಲ್ ಹೈಸ್ಕೂಲ್ ನಲ್ಲಿ ಕಳೆದ ವಾರ ‘ಡೊನಾಲ್ಡ್ ಟ್ರಂಪ್’ ಹತ್ಯೆ ಎಂಬ ಹಾಸ್ಯ ನಾಟಕವೊಂದನ್ನು ಪ್ರದರ್ಶಸಲಾಗಿತ್ತು.

ಹಂತಕನ ವೇಷ ಧರಿಸಿದ್ದ ವಿದ್ಯಾರ್ಥಿ ತನ್ನ ಮೊಬೈಲ್ ನಿಂದ ಗುಂಡು ಸಿಡಿಸಿದಂತಹ ಶಬ್ಧ ಮಾಡಿದ್ದ, ಟ್ರಂಪ್ ಪಾತ್ರಧಾರಿಯಾಗಿದ್ದ ವಿದ್ಯಾರ್ಥಿ ನೆಲಕ್ಕೆ ಕುಸಿದು ಬಿದ್ದು ಸತ್ತಂತೆ ನಟಿಸಿದ್ದ. ಇಬ್ಬರು ವಿದ್ಯಾರ್ಥಿಗಳು ಹಾಗೂ ಈ ಸ್ಕಿಟ್ ಪ್ರದರ್ಶಿಸಲು ತರಬೇತಿ ನೀಡಿದ್ದ ಶಿಕ್ಷಕರ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಾಟಕ ವೀಕ್ಷಿಸಿದ್ದ ವಿದ್ಯಾರ್ಥಿಯೊಬ್ಬನ ಪೋಷಕರಾದ ಹೆರಾಲ್ಡ್ ಹಾಗೂ ಮೆಲಿಂಡಾ ಬೀನ್ ದೂರು ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...