alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 6 ಲಕ್ಷ ರೂ. ವೆಚ್ಚದಲ್ಲಿ ತಯಾರಾಗಿದೆ ಮರ್ಸಿಡಿಸ್ ಬೆಂಜ್ ಕಾರು!

m-n

Mercedes Benz G 63 AMG 6×6 ಕಾರಿನ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಜಗತ್ತಿನ ಅತ್ಯಂತ ದುಬಾರಿ ಕಾರುಗಳಲ್ಲಿ ಇದೂ ಒಂದು. ಈ ಕಾರಿನ ಬೆಲೆ ಅಂದಾಜು 3.2 ಕೋಟಿ ರೂಪಾಯಿ. ಥೇಟ್ ಇದನ್ನೇ ಹೋಲುವ ಮತ್ತೊಂದು ಕಾರು ಈಗ ತಯಾರಾಗಿದೆ. ಆದ್ರೆ ಅದಕ್ಕಾಗಿ ಆದ ಖರ್ಚು ಎಷ್ಟು ಗೊತ್ತಾ? ಕೇವಲ 6 ಲಕ್ಷ ರೂಪಾಯಿ.

m1

ಜಪಾನ್ ನ ನಿಹಾನ್ ಆಟೋಮೇಟಿವ್ ಟೆಕ್ನಾಲಜಿ ಸ್ಕೂಲ್ ವಿದ್ಯಾರ್ಥಿಗಳು ಮರ್ಸಿಡಿಸ್ ಬೆಂಜ್  ಜಿ ಕಾರನ್ನು ತಯಾರಿಸಿದ್ದಾರೆ. ಅಸಲಿ ಮರ್ಸಿಡಿಸ್ ಗಿಂತ ಇದು ಕೂಡ ಕಮ್ಮಿಯೇನಿಲ್ಲ. ಗೇರ್ ಕೂಡ ಪಕ್ಕಾ ಒರಿಜಿನಲ್. ಹೆಡ್ ಲ್ಯಾಂಪ್ಸ್, ಬಂಪರ್, ಟೇಲ್ ಲ್ಯಾಂಪ್ಸ್ ಎಲ್ಲವೂ ಉತ್ತಮ ಗುಣಮಟ್ಟವನ್ನು ಹೊಂದಿವೆ.

ಟೋಕಿಯೋದ ಆಟೋ ಶೋನಲ್ಲಿ ಪ್ರದರ್ಶಿಸಲು ತಮ್ಮ ಪ್ರಾಜೆಕ್ಟ್ ನ ಭಾಗವಾಗಿ ಮರ್ಸಿಡಿಸ್ ಕಾರನ್ನು ವಿದ್ಯಾರ್ಥಿಗಳು ರೆಡಿ ಮಾಡಿದ್ದಾರೆ. ಅಸಲಿ ಮರ್ಸಿಡಿಸ್ ಹಾಗೂ ವಿದ್ಯಾರ್ಥಿಗಳು ತಯಾರಿಸಿರೋ ಈ ಕಾರಿನ ಲುಕ್ ನಲ್ಲಿ ಏನೂ ಬದಲಾವಣೆಯಿಲ್ಲ. ಆದ್ರೆ ಕಾರು ಓಡಿಸಿ ನೋಡಿದಾಗ ಮಾತ್ರ ವ್ಯತ್ಯಾಸ ತಿಳಿಯಲಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...