alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಮಾಜಿ ಪ್ರಧಾನಿ ಮೇಲೆ ಶೂ ಎಸೆತ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ವ್ಯಕ್ತಿಯೊಬ್ಬ ಶೂ ಎಸೆದಿದ್ದಾನೆ. ಈತ ಜಮಿಯಾ ನೈಮಿಯಾದ ಹಳೆ ವಿದ್ಯಾರ್ಥಿ ಎನ್ನಲಾಗಿದೆ. ಸದ್ಯ ತೆಹ್ರಿಕ್-ಇ-ಲಬ್ಬಕ್ ನ ಸದಸ್ಯನಾಗಿದ್ದಾನೆ.

ಲಾಹೋರ್ ಶಾಲೆಯೊಂದರ ಕಾರ್ಯಕ್ರಮಕ್ಕೆ ಬಂದಿದ್ದ ನವಾಜ್ ಶರೀಫ್ ಭಾಷಣ ಮಾಡಲು ಮುಂದಾದ್ರು. ಈ ವೇಳೆ ವಿದ್ಯಾರ್ಥಿಗಳ ಜೊತೆ ಕುಳಿತಿದ್ದ ವ್ಯಕ್ತಿ ಶೂ ಎಸೆದಿದ್ದಾನೆ. ಶೂ ನವಾಜ್ ಶರೀಫ್ ಎದೆಗೆ ತಾಕಿದೆ. ನಂತ್ರ ಎದ್ದುನಿಂತ ವ್ಯಕ್ತಿ ನವಾಜ್ ವಿರುದ್ಧ ಘೋಷಣೆ ಕೂಗಿದ್ದಾನೆ.

ಶೂ ಎಸೆದ ವ್ಯಕ್ತಿ ಹೆಸರು ತಲಹಾ ಮುನಾವರ್ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಂತ್ರ ಗುಂಪೊಂದು ಆರೋಪಿ ತಲಹಾ ಮುನಾವರ್ ಮೇಲೆ ದಾಳಿ ನಡೆಸಿದೆ. ತಲಹಾ ಗಾಯಗೊಂಡಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಶೂ ಎಸೆದ ನಂತ್ರ ನವಾಜ್ ಶರೀಫ್ ಭಾಷಣ ಮುಂದುವರೆಸಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...