alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಲೈವ್ ನಲ್ಲೇ ಉಡುಪು ಕಳಚಿದ್ಲು ಯುವತಿ….ಕಾರಣವೇನು ಗೊತ್ತಾ?

ಪ್ರಾಧ್ಯಾಪಕರ ಹೇಳಿಕೆಯನ್ನು ವಿರೋಧಿಸಿ ಯುವತಿಯೊಬ್ಬಳು ಪ್ರಬಂಧ ಮಂಡಿಸುವ ವೇಳೆ ತನ್ನ ಉಡುಪು ತೆಗೆದು ಅರೆನಗ್ನವಾಗಿ ಪ್ರತಿಭಟಿಸಿದ ಘಟನೆ ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಅಲ್ಲದೆ ಈ ಯುವತಿ ಬಟ್ಟೆ ತೆಗೆದು ಪ್ರತಿಭಟಿಸುವಾಗ ಫೇಸ್ ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಗಿದೆ.

ಕಾರ್ನೆಲ್ ವಿವಿಯ ವಿದ್ಯಾರ್ಥಿನಿ ಲೆಟಿಟಿಯಾ ಚೈ ತನ್ನ ನಿರ್ಮಾಣದ ‘ಎವರಿಡೇ ಲೈಫ್’ ಕಿರುಚಿತ್ರದ ನಟನೆ ವೇಳೆ, ಪ್ರಾಧ್ಯಾಪಕ ರಿಬೆಕಾ ಮ್ಯಾಗರ್ ತನ್ನ ಉಡುಪಿನ ಬಗ್ಗೆ ಅವಾಚ್ಯವಾಗಿ, ಸೆಕ್ಸಿ ಪದಗಳನ್ನು ಉಪಯೋಗಿಸಿ ಮಾತನಾಡಿದ್ದ. ಅಲ್ಲದೆ ತರಗತಿಯಲ್ಲಿ ನನ್ನ ಸಹಪಾಠಿಗಳೆದುರೇ ನಿನ್ನ ದೇಹ ಪುರುಷರನ್ನು ಆಹ್ವಾನಿಸುವಂತಿದೆ ಎಂದು ಅವಮಾನ ಮಾಡಿದ್ದ ಎಂದು ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾಳೆ.

ಇಷ್ಟಕ್ಕೂ ಆಕೆ ಪ್ರಬಂಧ ಮಂಡನೆ ಸಂದರ್ಭದಲ್ಲಿ ಬಟ್ಟೆ ಬಿಚ್ಚಲು ಕಾರಣವಾದ ಅಂಶವನ್ನೂ ತಿಳಿಸಿದ್ದಾಳೆ. ತಾನು ಆ ಪ್ರಾಧ್ಯಾಪಕನ ಹೇಳಿಕೆಗೆ ಬದ್ದನಾಗಿದ್ದೆ ಎಂದು ತಿಳಿದುಕೊಳ್ಳಬಾರದು. ಅಲ್ಲದೆ ಪ್ರತಿಯೊಬ್ಬ ಮಹಿಳೆಯೂ ಇಂತಹ ವಿಷಯಗಳನ್ನು ವಿರೋಧಿಸಬೇಕು, ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸಬೇಕು ಅಂತಾ ತಿಳಿಸಿದ್ದಾಳೆ.

ವಿದ್ಯಾರ್ಥಿನಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರಾಧ್ಯಾಪಕ ಮ್ಯಾಗರ್, ವಿದ್ಯಾರ್ಥಿಗಳಿಗೆ ಯಾವ ಬಟ್ಟೆ ಧರಿಸಬೇಕು, ಯಾವುದನ್ನು ಧರಿಸಬಾರದು ಅಂತಾ ಹೇಳಲ್ಲ. ಆದ್ರೆ ಸೂಕ್ತ ಉಡುಗೆಗಳನ್ನು ತೊಡುವಂತೆ ತಿಳಿಸಿದ್ದೇನೆ ಅಂತಾ ಸ್ಪಷ್ಟಪಡಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...