alex Certify
ಕನ್ನಡ ದುನಿಯಾ       Mobile App
       

Kannada Duniya

ಉಗುರು ಕಚ್ಚುವ ಅಭ್ಯಾಸವಿರುವವರು ಮಿಸ್ ಮಾಡ್ದೇ ಓದಿ

ಉಗುರು ಕಚ್ಚಬಾರದು ಎಂದು ಹಿರಿಯರು ಹೇಳುವುದರಲ್ಲಿ ವೈಜ್ಞಾನಿಕ ಸತ್ಯ ಅಡಗಿದೆ. ಗಾಬರಿ, ಟೆನ್ಷನ್‌ ಆಗುವ ವೇಳೆ ಕೆಲವರು ಉಗುರು ಕಚ್ಚುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಕ್ರಮೇಣ ಹವ್ಯಾಸ ಆಗುವುದೂ ಇದೆ. ಆಸ್ಟ್ರೇಲಿಯಾದ 20 ವರ್ಷದ ಹುಡುಗಿಯೊಬ್ಬಳು ಉಗುರು ಕಚ್ಚುವುದನ್ನು ಹವ್ಯಾಸ ಮಾಡಿಕೊಂಡಿದ್ದರಿಂದ ಹೆಬ್ಬೆರಳನ್ನೇ ಕತ್ತರಿಸಿ ತೆಗೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಉಗುರು ಕಚ್ಚಿದ್ದರಿಂದ ಅಪರೂಪದ ಕ್ಯಾನ್ಸರ್‌ಗೆ ವಿಥಾರ್ನ್ ಎಂಬ ಯುವತಿ ತುತ್ತಾಗಿದ್ದು, ಈಗ ಆಕೆಯ ಹೆಬ್ಬೆರಳನ್ನು ಕತ್ತರಿಸಿ ತೆಗೆಯಲಾಗಿದೆ. ಕಳೆದ ನಾಲ್ಕು ವರ್ಷದಿಂದ ಹೆಬ್ಬೆರಳಿನ ಉಗುರಿನ ಬಿಳಿಯ ಭಾಗ ಕಪ್ಪಾಗುತ್ತಿತ್ತು. ಈ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಿದಾಗ ಎಎಲ್‌ಎಂ ಎಂಬ ಅಪರೂಪದ ಕ್ಯಾನ್ಸರ್‌ ಇರುವುದು ಗೊತ್ತಾಗಿದೆ. ಅಂಗೈ, ಪಾದ, ಉಗುರುಗಳಲ್ಲಿ ಈ ಕ್ಯಾನ್ಸರ್‌ ಉಂಟಾಗುತ್ತದೆ.

ಆರಂಭದಲ್ಲಿ ಕಪ್ಪಗಾಗಿರುವ ಉಗುರನ್ನು ಮುಚ್ಚಲು ವಿಧವಿಧವಾದ ಕಸರತ್ತುಗಳನ್ನು ಮಾಡುತ್ತಿದ್ದೆ. ಏನೇ ಮಾಡಿದರೂ ಕಪ್ಪಗಾಗುವುದು ಹೆಚ್ಚಾಗಿದ್ದರಿಂದ ವೈದ್ಯರಲ್ಲಿ ಹೋಗಿದ್ದೆ. ತಪಾಸಣೆಯ ವರದಿಯಿಂದ ಕ್ಯಾನ್ಸರ್‌ ಎಂದು ತಿಳಿದು ಅಚ್ಚರಿಯಾಯಿತು ಎಂದು ವಿಥಾರ್ನ್ ಹೇಳಿದ್ದಾಳೆ.

ಶಾಲಾ ದಿನಗಳಿಂದಲೇ ವಿಥಾರ್ನ್ ಉಗುರು ಕಚ್ಚುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ವೈದ್ಯರು 4 ಶಸ್ತ್ರಚಿಕಿತ್ಸೆಗಳನ್ನು ನಡೆಸಿ, ಹೆಬ್ಬೆರಳನ್ನು ಕತ್ತರಿಸಿದ್ದಾರೆ. ಮುಂದಿನ 5 ವರ್ಷಗಳ ಕಾಲ ಅವಳನ್ನು ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕ್ಯಾನ್ಸರ್‌ ಮತ್ತೆ ಮರುಕಳಿಸುವುದೇ ಎಂದು ತಪಾಸಣೆ ಮಾಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...