alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಟ್ರಿಪ್ ಕ್ಲಬ್ ನಲ್ಲಿ ಈತನಿಗೆ ಸಿಕ್ಕಿದೆ ರಾಜೋಪಚಾರ

23ರ ಹರೆಯದ ಹ್ಯಾರಿ ಬಟ್ಲರ್ ಗೆ ಸದಾ ವ್ಹೀಲ್ ಚೇರ್ ಇರಲೇಬೇಕು. ಡಚೆನ್ ಎಂಬ ಸ್ನಾಯು ಕ್ಷಯದಿಂದ ಈತ ಬಳಲುತ್ತಿದ್ದಾನೆ. ನಡೆದಾಡುವುದು ಕೂಡ ಇವನಿಂದ ಅಸಾಧ್ಯ. ವಯಸ್ಸಿಗೆ ಬಂದ್ರೂ ಒಬ್ಬರೂ ಗರ್ಲ್ ಫ್ರೆಂಡ್ಸ್ ಸಿಕ್ಕಿರಲಿಲ್ಲ. ಮಗನ ಬೇಸರ ನೋಡಲಾಗದೆ ತಾಯಿ ಅವನನ್ನು ಸ್ಟ್ರಿಪ್ ಕ್ಲಬ್ ಗೆ ಕರೆತಂದಿದ್ಲು.

ಹ್ಯಾಮರ್ಸ್ಮಿತ್ ನಲ್ಲಿರೋ ಸೀಕ್ರೆಟ್ ಸ್ಟ್ರಿಪ್ ಕ್ಲಬ್ ತಾಯಿ- ಮಗನಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದೆ. ಹ್ಯಾರಿ, ಆತನ ತಾಯಿ ಅಲಿಸನ್, ಚಿಕ್ಕಮ್ಮ ಆನ್ ಮೇರಿ ಹಾಗೂ ಅಜ್ಜಿ ಮ್ಯಾಕ್ಸಿನ್ ಗೆ ಸ್ಟ್ರಿಪ್ ಕ್ಲಬ್ ನಲ್ಲಿ ರಾಜೋಪಚಾರ ಮಾಡಲಾಗಿದೆ. ಇವರ ಬಳಿ ಯಾವುದೇ ಪ್ರವೇಶ ಶುಲ್ಕ ಪಡೆದಿಲ್ಲ.

ಉಚಿತವಾಗಿ ಮದ್ಯವನ್ನೂ ಕೊಟ್ಟಿದ್ದಾರೆ, ಅಷ್ಟೇ ಅಲ್ಲ ಡಾನ್ಸ್ ಮಾಡಲು ಕೂಡ ಅವಕಾಶ ಕಲ್ಪಿಸಿದ್ದಾರೆ. ಸ್ಟ್ರಿಪ್ ಕ್ಲಬ್ ನಲ್ಲಿರೋ ಯುವತಿಯರೆಲ್ಲ ಹ್ಯಾರಿ ಜೊತೆ ಪ್ರೀತಿಯಿಂದ ಮಾತನಾಡಿರೋದು ಮನೆಯವರಿಗೆ ಖುಷಿ ಕೊಟ್ಟಿದೆ. ಹ್ಯಾರಿ ಬದುಕಿನಲ್ಲಿ ಇದು ಮರೆಯಲಾಗದ ರಾತ್ರಿ ಅಂತಾ ಆತನ ಅಜ್ಜಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...