alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿ ನಾಯಿಗಳಿಗಾಗಿಯೇ ಇದೆ ಒಂದು ಪ್ರತ್ಯೇಕ ತಾಣ…!

 

ಭಾರತದಲ್ಲಿ ಬೀದಿ ನಾಯಿಗಳ ಸಮಸ್ಯೆ ವಿಪರೀತವಾಗಿದೆ. ಮಕ್ಕಳೂ ಸೇರಿದಂತೆ ಹಲವರು ಬೀದಿ ನಾಯಿಗಳ ದಾಳಿಗೆ ಬಲಿಯಾಗಿದ್ದು, ಬೀದಿ ನಾಯಿಗಳನ್ನು ನಿಯಂತ್ರಿಸಬೇಕೆಂಬ ಕೂಗು ಇಂತಹ ಸಂದರ್ಭಗಳಲ್ಲಿ ಕೇಳಿ ಬರುತ್ತದೆ. ಆದರೆ ಅವುಗಳಿಗಾಗಿಯೇ ಒಂದು ಪ್ರತ್ಯೇಕ ಸ್ಥಳವಿದ್ದರೆ…?

ಹೌದು, ಬೀದಿ ನಾಯಿಗಳಿಗಾಗಿಯೇ ಮೀಸಲಾಗಿರಿಸಿದ ಪ್ರತ್ಯೇಕ ಸ್ಥಳವೊಂದು ಕೋಸ್ಟಾರಿಕಾದಲ್ಲಿದೆ. ಇಲ್ಲಿ ಸಾವಿರಾರು ನಾಯಿಗಳಿದ್ದು, ಸ್ವಚ್ಚಂದವಾಗಿ ತಿರುಗುತ್ತವೆ. ಇಲ್ಲಿಗೆ ಆಗಮಿಸುವ ಶ್ವಾನ ಪ್ರಿಯರು ಅವುಗಳಿಗೆ ಆಹಾರ ನೀಡುವುದಲ್ಲದೇ ಸ್ನಾನ ಮಾಡಿಸಿ ತಮ್ಮ ಪ್ರೀತಿ ಮೆರೆಯುತ್ತಾರೆ.

ಈಗ ಇದೊಂದು ಪ್ರೇಕ್ಷಣಿಯ ಸ್ಥಳವಾಗಿದ್ದು, ಬೀದಿ ನಾಯಿಗಳಿಗಾಗಿಯೇ ಪ್ರತ್ಯೇಕ ಸ್ಥಳ ಕಲ್ಪಿಸಿರುವುದು ಶ್ವಾನ ಪ್ರಿಯರ ಶ್ಲಾಘನೆಗೆ ಒಳಗಾಗಿದೆ. ಈ ನಾಯಿಗಳಿಗೆ ಆರೈಕೆ ಮಾಡಲೆಂದೇ ವಾರಾಂತ್ಯದ ದಿನಗಳಂದು ಹಲವು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...