alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮುಕರಿಂದ ಕಾಪಾಡಿದ ನಾಯಿಗಾಗಿ ಯುವತಿ ಮಾಡಿದ್ದಾಳೆ ಈ ಕೆಲಸ

ado

25 ವರ್ಷದ ಯುವತಿ ಜಾರ್ಜಿಯಾ ಬ್ರಾಡ್ಲಿ ಈಗ 7 ನಾಯಿಗಳ ಒಡತಿ. ಲಂಡನ್ ನ ಪ್ಲೇ ಮೌತ್ ಯೂನಿವರ್ಸಿಟಿ ವಿದ್ಯಾರ್ಥಿನಿಯಾಗಿರೋ ಜಾರ್ಜಿಯಾ ತನ್ನ ಬಾಯ್ ಫ್ರೆಂಡ್ ಜೊತೆಗೆ ಗ್ರೀಸ್ ಗೆ ಪ್ರವಾಸ ಹೋಗಿದ್ಲು. ಅಲ್ಲಿ ಒಂಟಿಯಾಗಿ ಸುತ್ತಾಡಿಕೊಂಡು ಬರೋಣ ಅಂತ ಪ್ರಿಯತಮನನ್ನು ಹೋಟೆಲ್ ನಲ್ಲೇ ಬಿಟ್ಟು ಒಬ್ಬಳೇ ಹೊರಬಿದ್ದಿದ್ದಾಳೆ.

ಬೀಚ್ ಕಡೆಗೆ ಹೋಗ್ತಿದ್ದಾಗ ಇಬ್ಬರು ಅಪರಿಚಿತರು ಅವಳನ್ನ ಮಾತನಾಡಿಸಲು ಯತ್ನಿಸಿದ್ದಾರೆ. ನಂತರ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಜಾರ್ಜಿಯಾ ಅದನ್ನು ನಯವಾಗಿಯೇ ತಿರಸ್ಕರಿಸಿದ್ಲು. ಆಗ ಅವರಲ್ಲೊಬ್ಬ ಅವಳ ಕೈಹಿಡಿದು ಎಳೆದ. ಇದ್ದಕ್ಕಿದ್ದಂತೆ ಬೀದಿನಾಯಿಯೊಂದು ಜಾರ್ಜಿಯಾಳ ನೆರವಿಗೆ ಬಂದಿತ್ತು. ಜಾರ್ಜಿಯಾ ಪಕ್ಕಕ್ಕೆ ಬಂದು ನಿಂತ ನಾಯಿ ಜೋರಾಗಿ ಬೊಗಳಿ ದುಷ್ಕರ್ಮಿಗಳನ್ನು ಅಲ್ಲಿಂದ ಓಡಿಸಿದೆ.

ad

ಅಷ್ಟೇ ಅಲ್ಲ ಯುವತಿ ಸುರಕ್ಷಿತವಾಗಿ ಕೋಣೆ ತಲುಪುವವರೆಗೂ ಆ ನಾಯಿ ಜೊತೆಯಲ್ಲೇ ಬಂದಿತ್ತು. ಗ್ರೀಸ್ ನಲ್ಲಿದ್ದಷ್ಟು ದಿನವೂ ಜಾರ್ಜಿಯಾಗೆ ಆ ನಾಯಿಯ ಜೊತೆಗೆ ಆತ್ಮೀಯತೆ ಬೆಳೆದಿತ್ತು. ಅದಕ್ಕೆ ಪೆಪ್ಪರ್ ಅಂತಾ ಜಾರ್ಜಿಯಾ ಹೆಸರಿಟ್ಟಿದ್ಲು. ಪ್ರವಾಸ್ ಮುಗಿಸಿ ಲಂಡನ್ ಗೆ ಮರಳಿದ ಮೇಲೂ ಜಾರ್ಜಿಯಾಗೆ ನಾಯಿಯದ್ದೇ ಚಿಂತೆ. ಅದನ್ನು ದತ್ತು ಪಡೆಯಲೇಬೇಕು ಅಂತಾ ನಿರ್ಧರಿಸಿದ ಜಾರ್ಜಿಯಾ ಮತ್ತೆ ಮರಳಿ ಗ್ರೀಸ್ ಗೆ ಬಂದ್ಲು.

ಅಷ್ಟು ದೊಡ್ಡ ನಗರದಲ್ಲಿ ಬೀದಿ ನಾಯಿಯೊಂದನ್ನು ಹುಡುಕೋದು ಸುಲಭವಾಗಿರಲಿಲ್ಲ. ಆದ್ರೆ ಜಾರ್ಜಿಯಾಳ ಅದೃಷ್ಟ ಚೆನ್ನಾಗಿತ್ತು. ಬೀಚ್ ಒಂದರಲ್ಲಿ ಮುದ್ದು ಶ್ವಾನ ಪೆಪ್ಪರ್ ಕಣ್ಣಿಗೆ ಬಿದ್ದಿತ್ತು. ಅದನ್ನು ದತ್ತು ಪಡೆಯುವ ಪ್ರಕ್ರಿಯೆ ಕೂಡ ಸ್ವಲ್ಪ ಕಷ್ಟವಾಗಿತ್ತು. ಕೊನೆಗೂ ಮೂರು ಬಾರಿ 6000 ಕಿಮೀ ದೂರದ ಗ್ರೀಸ್ ಗೆ ಪ್ರಯಾಣಿಸಿದ ಜಾರ್ಜಿಯಾ ನಾಯಿಯನ್ನು ತನ್ನ ಮನೆಗೆ ಕರೆದೊಯ್ದಿದ್ದಾಳೆ. ಆ ಸಮಯದಲ್ಲಿ ನಾಯಿ ಗರ್ಭಿಣಿಯಾಗಿತ್ತು. ಲಂಡನ್ ಗೆ ತೆರಳಿದ ಬಳಿಕ 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...