alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರಿಚಿತನ ಸಹಾಯ ಕಂಡು ಕಣ್ಣೀರಾದ ಯುವತಿ…!

ಪ್ರಯಾಣದ ವೇಳೆ ಕೆಲ ಪ್ರಯಾಣಿಕರು ಇತರೆ ಸಹ ಪ್ರಯಾಣಿಕರ ಪರಿವೆಯಿಲ್ಲದೇ ತಮ್ಮ ವೈಯಕ್ತಿಕ ವಿಚಾರಗಳ ಕುರಿತು ಪರಿಚಿತರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿರುತ್ತಾರೆ. ಹೀಗೆ ತನ್ನ ಹಣಕಾಸು ಮುಗ್ಗಟ್ಟನ್ನು ಮೊಬೈಲ್ ಮೂಲಕ ತಾಯಿಯೊಂದಿಗೆ ಹೇಳಿಕೊಳ್ಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಅನಿರೀಕ್ಷಿತ ನೆರವು ಲಭಿಸಿದೆ.

23 ವರ್ಷದ ವಿದ್ಯಾರ್ಥಿನಿ Ella Johannessen ರೈಲಿನಲ್ಲಿ ಲಂಡನ್ ನಿಂದ ಲೀಡ್ಸ್ ಗೆ ಪ್ರಯಾಣ ಬೆಳೆಸುತ್ತಿದ್ದು, ಮಾರ್ಗ ಮಧ್ಯದಲ್ಲಿ ತಾಯಿಗೆ ಕರೆ ಮಾಡಿದ ಆಕೆ ತನಗೆ ಹಣಕಾಸಿನ ಮುಗ್ಗಟ್ಟು ಎದುರಾಗಿರುವುದನ್ನು ಹೇಳಿಕೊಂಡಿದ್ದಾಳಲ್ಲದೇ ಮನೆಯ ಪರಿಸ್ಥಿತಿಯೂ ಸರಿಯಿರದ ಕಾರಣ ನಿಮ್ಮಿಂದ ಕೇಳಲೂ ಆಗುತ್ತಿಲ್ಲವೆಂದಿದ್ದಾಳೆ.

ಇಷ್ಟಾದ ಬಳಿಕ Ella Johannessen ನಿದ್ರೆಗೆ ಜಾರಿದ್ದು, ಎಚ್ಚರಗೊಂಡ ಆಕೆಗೆ ಅಚ್ಚರಿ ಕಾದಿದೆ. ಈಕೆ ತನ್ನ ತಾಯಿಯೊಂದಿಗೆ ಮಾತನಾಡುತ್ತಿದ್ದುದ್ದನ್ನು ಕೇಳಿಸಿಕೊಂಡಿದ್ದ ಅಪರಿಚಿತ ಸಹ ಪ್ರಯಾಣಿಕರೊಬ್ಬರು ಆಕೆಯ ಕಷ್ಟಕ್ಕೆ ಮರುಗಿ Ella Johannessen ಅಗತ್ಯವಿದ್ದ ಹಣಕ್ಕಿಂತ ಮೂರು ಪಟ್ಟು ಹಣವನ್ನು ಒಂದು ಕವರ್ ನಲ್ಲಿರಿಸಿ ಇಳಿದು ಹೋಗಿದ್ದಾರೆ. Ella Johannessen ಗೆ 35 ಪೌಂಡ್ ಅಗತ್ಯವಿದ್ದು, ಅಪರಿಚಿತ ವ್ಯಕ್ತಿ 100 ಪೌಂಡ್ ಗಳನ್ನಿರಿಸಿದ್ದಾರೆ. ಅಪರಿಚಿತ ಸಹೃದಯಿ ವ್ಯಕ್ತಿಯ ಸಹಾಯ ಕಂಡು Ella Johannessen ಅಕ್ಷರಶಃ ಕಣ್ಣೀರಿಟ್ಟಿದ್ದಾಳೆ. ಈ ಎಲ್ಲ ವಿಚಾರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಆಕೆ ಹಾಕಿದ್ದು, 6 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...