alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಬೀರಿಯಾ ಬೀಚ್ ನಲ್ಲಿ ಹಿಮದ ಚೆಂಡುಗಳ ರಾಶಿ….

snow-ball

ಸೈಬೀರಿಯಾದಲ್ಲಿ ಅಪರೂಪದ ದೃಶ್ಯವೊಂದು ಎಲ್ಲರನ್ನ ಅಚ್ಚರಿಯ ಕಡಲಲ್ಲಿ ಮುಳುಗಿಸಿದೆ. ಇಲ್ಲಿನ ಬೀಚ್ ಒಂದರಲ್ಲಿ ನೈಸರ್ಗಿಕವಾಗಿಯೇ ಹಿಮದ ಚೆಂಡುಗಳು ಸೃಷ್ಟಿಯಾಗಿವೆ. ಸುಮಾರು 18 ಕಿಮೀ ವಿಸ್ತಾರವಾದ ಪ್ರದೇಶಗಳಲ್ಲಿ ಸ್ನೋ ಬಾಲ್ ಗಳು ರಾಶಿ ರಾಶಿಯಾಗಿ ಬಿದ್ದಿವೆ.

ಕರಾವಳಿ ತೀರ ಸಂಪೂರ್ಣ ಹಿಮದಿಂದ ಆವೃತವಾಗಿದ್ದು, ಟೆನಿಸ್ ಬಾಲ್ ಗಾತ್ರದ ಹಿಮದ ಚೆಂಡುಗಳು ಕಣ್ಮನ ಸೆಳೆಯುತ್ತಿವೆ. ಚಿಕ್ಕ ಚಿಕ್ಕ ಮಂಜುಗಡ್ಡೆಯ ತುಣುಕುಗಳು ಗಾಳಿಯ ರಭಸಕ್ಕೆ ಉರುಳಿಕೊಂಡು ಹೋಗಿ ಚೆಂಡಿನ ಗಾತ್ರ ಪಡೆದಿವೆ ಎನ್ನಲಾಗ್ತಿದೆ.

ಈ ಕಡಲ ತೀರದ ಸನಿಹದಲ್ಲಿರುವ ನ್ಯಾಡಾ ಗ್ರಾಮಸ್ಥರು ಇಂತಹ ದೃಶ್ಯವನ್ನು ಹಿಂದೆಂದೂ ಕಂಡಿರಲಿಲ್ಲ ಅಂತಾ ತಿಳಿಸಿದ್ದಾರೆ. 2014 ರ ಡಿಸೆಂಬರ್ ನಲ್ಲಿ ಫಿನ್ ಲ್ಯಾಂಡ್ ಕೊಲ್ಲಿಯಲ್ಲೂ ಇಂಥದ್ದೇ ಬಾಲ್ ಗಳು ಸೃಷ್ಟಿಯಾಗಿದ್ದವು. 2015 ರ ಡಿಸೆಂಬರ್ ನಲ್ಲಿ ಮಿಚಿಗನ್ ಸರೋವರ ಕೂಡ ಇಂತಹ ದೃಶ್ಯಕ್ಕೆ ಸಾಕ್ಷಿಯಾಗಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...