alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವ ಉಳಿಸಿಕೊಳ್ಳಲು 140 ಕಿಮೀ ನಡೆದ ಯುವಕ

ಆಸ್ಟ್ರೇಲಿಯಾದ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದ ಯುವಕನೊಬ್ಬನ ಕಾರು ಅಪಘಾತಕ್ಕೀಡಾಗಿದ್ರಿಂದ 140 ಕಿಮೀ ನಡೆದುಕೊಂಡು ಸಾಗಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ತನ್ನದೇ ಮೂತ್ರ ಕುಡಿದಿದ್ದಾನೆ.

ಟೆಕ್ನಿಶಿಯನ್ ಆಗಿದ್ದ ಥಾಮಸ್ ಮಾಸೊನ್, ಕಳೆದ ವಾರ ದಕ್ಷಿಣ ಆಸ್ಟ್ರೇಲಿಯಾದ ಗಡಿಯಲ್ಲಿ ಕೆಲಸ ಮಾಡುತ್ತಿದ್ದ. ನಂತರ ಒಬ್ಬಂಟಿಯಾಗಿ ಕಾರಿನಲ್ಲಿ ಅಲ್ಲಿಂದ ವಾಪಸ್ ಬರುತ್ತಿದ್ದ. ದಿಢೀರನೆ ಒಂಟೆಗಳ ಕೂಗು ಕೇಳಿಸಿದೆ. ನಿರ್ಜನ ಪ್ರದೇಶವಾಗಿದ್ದರಿಂದ ಹೆದರಿದ ಥಾಮಸ್ ವೇಗವಾಗಿ ಕಾರು ಓಡಿಸಿದ್ದಾನೆ. ಈ ವೇಳೆ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಥಾಮಸ್ ಅಪಾಯದಿಂದ ಪಾರಾಗಿದ್ದ.

ಆದ್ರೆ ಅಲ್ಲಿಂದ ವಾಪಸ್ ಬರಲು ಯಾವುದೇ ವಾಹನವಿರಲಿಲ್ಲ. ಜನಸಂಚಾರ, ಮೊಬೈಲ್ ನೆಟ್ವರ್ಕ್ ಯಾವುದೂ ಇರಲಿಲ್ಲ. ಒಂದೆರಡು ಜೊತೆ ಬಟ್ಟೆ, ಒಂದು ಟಾರ್ಚ್ ಇತ್ತು. ತಿನ್ನಲು ಆಹಾರ, ಕುಡಿಯೋ ನೀರು ಕೂಡ ಇರಲಿಲ್ಲ. ಆದ್ರೂ ಎದೆಗುಂದದ ಥಾಮಸ್, 60 ಗಂಟೆಗಳ ಕಾಲ ಸತತವಾಗಿ ನಡೆದಿದ್ದಾನೆ.

ಜೀವ ಉಳಿಸಿಕೊಳ್ಳಲು ತನ್ನದೇ ಮೂತ್ರ ಕುಡಿದಿದ್ದಾನೆ. ಶುಕ್ರವಾರ ರಾತ್ರಿ ಆತ ಮುಖ್ಯರಸ್ತೆ ತಲುಪಿದ್ದ. ದಾರಿಹೋಕರ ನೆರವಿನಿಂದ ತಂದೆಯನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದ್ದ. ಕೊನೆಗೂ ಸುರಕ್ಷಿತವಾಗಿ ಥಾಮಸ್ ಮನೆ ತಲುಪಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...