alex Certify
ಕನ್ನಡ ದುನಿಯಾ       Mobile App
       

Kannada Duniya

ಸೇವೆ ನಿಧಾನ ಎಂದು ಕಮೆಂಟ್ ಮಾಡಿದ ಗ್ರಾಹಕಿಗೆ ಆಗಿದ್ದೇನು ಗೊತ್ತಾ…?

ಸಾಮಾನ್ಯವಾಗಿ ಎಲ್ಲಾ ಉದ್ಯಮಗಳಲ್ಲೂ ಗ್ರಾಹಕರ ಅಭಿಪ್ರಾಯ ಪಡೆಯಲಾಗುತ್ತದೆ. ಅವರ ಫೀಡ್ ಬ್ಯಾಕ್ ಗೆ ಅನುಗುಣವಾಗಿ ಸೇವೆಗಳಲ್ಲಿ ಬದಲಾವಣೆ ಮಾಡೋದು ಕೂಡ ಸಹಜ. ಆದ್ರೆ ಕೆಲವೊಮ್ಮೆ ನೆಗೆಟಿವ್ ರಿವ್ಯೂ ಗ್ರಾಹಕರಿಗೇ ತೊಂದರೆ ಉಂಟುಮಾಡಬಹುದು.

ಚೀನಾದ ಮಳಿಗೆಯೊಂದರ ಬಗ್ಗೆ ಕಂಪ್ಲೇಂಟ್ ಮಾಡಿದ್ದಕ್ಕೆ ಮಹಿಳೆ ಮೇಲೆ ಹಲ್ಲೆ ನಡೆದಿದೆ. ಮಳಿಗೆಯಲ್ಲಿ ಸೇವೆ ತುಂಬಾ ನಿಧಾನವಾಗ್ತಿದೆ ಅಂತಾ ಆ ಗ್ರಾಹಕಿ ಹೇಳಿದ್ಲು. ಅಷ್ಟಕ್ಕೇ ಮಳಿಗೆ ಮಾಲೀಕ ಝಾಂಗ್ ಎಂಬಾತ ಸಿಟ್ಟಾಗಿದ್ದ. ಅವಳನ್ನು ಹುಡುಕಿಕೊಂಡು 852 ಕಿಮೀ ಪ್ರಯಾಣಿಸಿದ್ದಾನೆ.

ಕ್ಸಿಯಾವೋ ಡೈ ಎಂಬ ಮಹಿಳೆಗೆ ಒದ್ದಿದ್ದಾನೆ. ಮುಖಕ್ಕೆ ಪಂಚ್ ಮಾಡಿದ್ದಾನೆ. ಝಾಂಗ್ ಆನ್ ಲೈನ್ ಶಾಪ್ ನಡೆಸ್ತಿದ್ದಾನೆ. ಮಹಿಳೆ ಅಲ್ಲಿ ಬಟ್ಟೆಗಳನ್ನು ಆರ್ಡರ್ ಮಾಡಿದ್ಲು. 3 ದಿನವಾದ್ರೂ ಡೆಲಿವರಿ ಆಗಿರಲಿಲ್ಲ. ಹಾಗಾಗಿ ಸೇವೆ ತುಂಬಾ ನಿಧಾನ ಅಂತಾ ಆಕೆ ಕಮೆಂಟ್ ಮಾಡಿದ್ಲು.

ಇದರಿಂದ ರೊಚ್ಚಿಗೆದ್ದ ಮಳಿಗೆ ಮಾಲೀಕ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸರು ಝಾಂಗ್ ನನ್ನು ಬಂಧಿಸಿ 10 ದಿನ ಜೈಲಿನಲ್ಲಿಟ್ಟಿದ್ರು. ಆತನ ಆನ್ ಲೈನ್ ಶಾಪ್ ಅಕೌಂಟ್ ಅನ್ನು ಕೂಡ ಡಿಲೀಟ್ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...