alex Certify
ಕನ್ನಡ ದುನಿಯಾ       Mobile App
       

Kannada Duniya

ಸದಾ ಯಂಗ್ ಆಗಿರಲು ಈತ ಮಾಡ್ತಾನೆ ಇಂಥ ಕೆಲಸ..!

ಕ್ಯಾಲಿಫೋರ್ನಿಯಾದ ನಿವಾಸಿಯೊಬ್ಬ ಸದಾ ಯಂಗ್ ಹಾಗೂ ಫಿಟ್ ಆಗಿ ಕಾಣಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಸ್ಟೀವ್ ಲುಡ್ವಿನ್ ಹಾವಿನ ವಿಷವನ್ನು ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ತಿದ್ದಾನೆ. ತನ್ನ 17ನೇ ವಯಸ್ಸಿನಿಂದಲೇ ಈ ಪ್ರಕ್ರಿಯೆ ಶುರು ಮಾಡಿದ್ದಾನೆ ಸ್ವೀವ್.

ಯಂಗ್ ಹಾಗೂ ಫಿಟ್ ಆಗಿರಲು ಸ್ಟೀವ್ ಲುಡ್ವಿನ್ ಹಾವಿನ ವಿಷವನ್ನು ಚುಚ್ಚುಮದ್ದಿನ ರೂಪದಲ್ಲಿ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾನೆ. ಸಣ್ಣ ವಯಸ್ಸಿನಲ್ಲಿಯೇ ಹಾವಿನ ಬಗ್ಗೆ ಸ್ಟೀವ್ ಲುಡ್ವಿನ್ ತಿಳಿದುಕೊಂಡಿದ್ದನಂತೆ. ಆತನ ಬಳಿ 18 ಹಾವಿದೆ. ಇದ್ರಿಂದ ವಿಷ ತೆಗೆಯುತ್ತಾನೆ ಸ್ಟೀವ್ ಲುಡ್ವಿನ್.

ಇದೊಂದು ನೋವಿನ ಪ್ರಕ್ರಿಯೆಯಾಗಿದ್ದು, ಹಾವಿನ ಜೀವಕ್ಕೆ ಹಾನಿಯಾಗದಂತೆ ವಿಷ ತೆಗೆಯುತ್ತೇನೆಂದು ಆತ ಹೇಳಿದ್ದಾನೆ. ಸ್ಟೀವ್ ಲುಡ್ವಿನ್ 10ನೇ ವಯಸ್ಸಿನಲ್ಲಿರುವಾಗ ಆತನಿಗೆ ಹಾವು ಕಚ್ಚಿತ್ತಂತೆ. ಆದ್ರೆ ಅದ್ರಿಂದ ಯಾವುದೇ ಹಾನಿಯಾಗಿರಲಿಲ್ಲವಂತೆ. ಸ್ಟೀವ್ ಲುಡ್ವಿನ್ ತಂದೆ ಪೈಲೆಟ್. ಅವ್ರ ಜೊತೆ ವೈದ್ಯರೊಬ್ಬರನ್ನು ಸ್ಟೀವ್ ಲುಡ್ವಿನ್ ಭೇಟಿ ಮಾಡಿದ್ದನಂತೆ. ಆ ವೈದ್ಯ ಹಾವಿನ ವಿಷವನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದನಂತೆ. ಇದು ಬಹಳ ಒಳ್ಳೆಯದು ಎಂಬ ಸಲಹೆಯನ್ನೂ ನೀಡಿದ್ದನಂತೆ. ನಂತ್ರ ಹಾವಿನ ಬಗ್ಗೆ ಅಭ್ಯಾಸ ಮಾಡಿದ ಸ್ಟೀವ್ ಲುಡ್ವಿನ್ ಆರಂಭದಲ್ಲಿ ಕಡಿಮೆ ಡೋಸ್ ತೆಗೆದುಕೊಳ್ಳುತ್ತಿದ್ದನಂತೆ. ಈಗ ಹೆಚ್ಚು ಮಾಡಿದ್ದಾಗಿ ಸ್ಟೀವ್ ಲುಡ್ವಿನ್ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...