alex Certify
ಕನ್ನಡ ದುನಿಯಾ       Mobile App
       

Kannada Duniya

ಬಡವರಿಗೆ ನೆರವಾಗಲು ಕದೀತಿದ್ದ ಬ್ಯಾಂಕ್ ಮ್ಯಾನೇಜರ್

ಶ್ರೀಮಂತರಿಂದ ದೋಚಿದ್ದನ್ನು ಬಡವರಿಗೆ ಹಂಚುತ್ತಿದ್ದ ರಾಬಿನ್ ಹುಡ್ ಎಂಬಾತನ ಕಥೆ ಎಲ್ಲರಿಗೂ ಗೊತ್ತಿರುತ್ತದೆ. ಈಗ ಅಂಥದ್ದೇ ರಾಬಿನ್ ಹುಡ್ ಒಬ್ಬ ಕಾಣಿಸಿಕೊಂಡಿದ್ದಾನೆ. ವಿಶೇಷವೆಂದರೆ ಆತನೊಬ್ಬ ಬ್ಯಾಂಕ್ ಮ್ಯಾನೇಜರ್.

ಆತ ಶ್ರೀಮಂತ ಖಾತೆದಾರರ ಹಣವನ್ನು ಅವರಿಗೆ ಗೊತ್ತಿಲ್ಲದಂತೆ ಹಣದ ತೀರಾ ಅಗತ್ಯವಿರುವ ಬಡವರ ಖಾತೆಗೆ ವರ್ಗಾಯಿಸುತ್ತಿದ್ದುದು ಈಗ ಬೆಳಕಿಗೆ ಬಂದಿದೆ. ಅಂದಹಾಗೆ ಇದು ನಡೆದದ್ದು ಇಟಲಿಯಲ್ಲಿ.

ಇಟಲಿಯ ಫಾರ್ನಿ ಡಿ ಸೊಪ್ರಾ ಎಂಬ ಪ್ರದೇಶದಲ್ಲಿನ ಬ್ಯಾಂಕ್‍ವೊಂದರ ಮ್ಯಾನೇಜರ್ ಗಿಲ್ಬರ್ಟೊ ಬಶ್ಚೀರಾ ಈ ಕೃತ್ಯ ಎಸಗಿದ್ದಾನೆ. ಏಳು ವರ್ಷಗಳಿಗೂ ಅಧಿಕ ಕಾಲ ಹೀಗೆ ಮಾಡಿರುವ ಆತ 1.15 ಮಿಲಿಯನ್ ಡಾಲರ್ ವಂಚಿಸಿದ್ದಾನೆ.

ವಿಶೇಷವೆಂದರೆ ಆತ ಈ ಹಣದಲ್ಲಿ ಒಂಚೂರೂ ಸ್ವಂತಕ್ಕೆ ಬಳಸಿಲ್ಲ. ತೀರಾ ಬಡವರನ್ನು ಗುರುತಿಸಿ ಶ್ರೀಮಂತರಿಗೆ ಗೊತ್ತಾಗದಂತೆ ಅವರ ಹಣವನ್ನು ಬಡವರ ಖಾತೆಗೆ ವರ್ಗಾಯಿಸಿದ್ದಾನೆ.

“ಉಪಕೃತರು ಮುಂದೆ ಆ ಹಣವನ್ನು ಮರಳಿಸುತ್ತಾರೆ ಎಂದು ಆತ ನಂಬಿದ್ದ, ಆದರೆ ಕೆಲವರು ಹಣ ವಾಪಸ್ ಮಾಡಿಲ್ಲ” ಎಂದು ಗಿಲ್ಬರ್ಟ್‍ನ ವಕೀಲರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...