alex Certify
ಕನ್ನಡ ದುನಿಯಾ       Mobile App
       

Kannada Duniya

ಹುಷಾರ್….ಡಿನ್ನರ್ ಡೇಟ್ ನಲ್ಲಿ ಹೀಗೂ ಆಗಬಹುದು

ಸಾಮಾಜಿಕ ಜಾಲತಾಣಗಳು, ಡೇಟಿಂಗ್ ಆ್ಯಪ್ ಗಳ ಹಾವಳಿಯಿಂದಾಗಿ ಈಗ ಪ್ರೀತಿಯಲ್ಲಿ ಬೀಳುವವರ ಸಂಖ್ಯೆ ಹೆಚ್ಚು. ಎಷ್ಟೋ ಬಾರಿ ಅಪರಿಚಿತರನ್ನು ನಂಬಿ ಮೋಸ ಹೋಗುವುದು ಕೂಡ ಇದೆ. ಅಮೆರಿಕದ ನ್ಯೂಯಾರ್ಕ್ ನಲ್ಲಿ ಡೇಟಿಂಗ್ ಗೆ ಹೋಗಿದ್ದ ಯುವತಿಯೊಬ್ಳು, ಪ್ರಿಯಕರನಿಂದ್ಲೇ ವಂಚನೆಗೆ ಒಳಗಾಗಿದ್ದಾಳೆ.

ನವೆಂಬರ್ 19ರಂದು ಆ ಯುವತಿ ಅಂಟೊನಿಯೋ ಎಂಬಾತನ ಜೊತೆ ಡಿನ್ನರ್ ಡೇಟ್ ಗೆ ಹೋಗಿದ್ಲು. ಇಬ್ಬರೂ ಜೊತೆಯಾಗಿ ರುಚಿಯಾದ ಖಾದ್ಯಗಳನ್ನು ಸವಿದಿದ್ದಾರೆ, ವೈನ್ ಹೀರಿದ್ದಾರೆ. ಪರಸ್ಪರರ ಇಷ್ಟ, ಕಷ್ಟಗಳ ಬಗ್ಗೆ ಚೆನ್ನಾಗಿ ಹರಟಿದ್ದಾರೆ. ಊಟವಾದ್ಮೇಲೆ ಅಂಟೊನಿಯೋ, ತನ್ನ ಗೆಳತಿಯ ಕ್ರೆಡಿಟ್ ಕಾರ್ಡ್ ನಿಂದ್ಲೇ ಹಣ ಪಾವತಿಸಿದ್ದ.

ಆಮೇಲೆ ಇಬ್ಬರೂ ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಅಷ್ಟರಲ್ಲಿ ಯುವತಿಯ ಬಳಿಯಿದ್ದ ಕ್ರೆಡಿಟ್ ಕಾರ್ಡ್ ಹಾಗೂ ಮ್ಯಾಕ್ ಬುಕ್ ಮಾಯವಾಗಿತ್ತು. ಎರಡನ್ನೂ ಗೆಳೆಯ ಆಂಟೊನಿಯೋ ಎಗರಿಸಿಬಿಟ್ಟಿದ್ದ. ಅಷ್ಟೇ ಅಲ್ಲ ಪ್ರೇಯಸಿಯ ಕ್ರೆಡಿಟ್ ಕಾರ್ಡ್ ಕದ್ದು ಬಿಂದಾಸ್ ಆಗಿ ಶಾಪಿಂಗ್ ಮಾಡಿದ್ದಾನೆ. ಕೊನೆಗೆ ತಾನು ಮೋಸ ಹೋಗಿದ್ದೇನೆ ಅನ್ನೋದನ್ನು ಅರಿತ ಯುವತಿ ಪೊಲೀಸರಿಗೆ ದೂರು ನೀಡಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...