alex Certify
ಕನ್ನಡ ದುನಿಯಾ       Mobile App
       

Kannada Duniya

ಬೊಜ್ಜಿನ ಸಮಸ್ಯೆಯಿರುವವರು ಓದಲೇಬೇಕಾದ ಸುದ್ದಿಯಿದು

ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಓದಲೇಬೇಕಾದ ಸುದ್ದಿ ಇದು. ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಹೊಸ ಸಂಶೋಧನೆಯೊಂದು ಸರಳ ಟಿಪ್ಸ್ ಕೊಟ್ಟಿದೆ. ದಿನಕ್ಕೆ 6 ಗಂಟೆಗಳ ಕಾಲ ಕುಳಿತುಕೊಳ್ಳುವ ಬದಲು ನಿಂತುಕೊಂಡಿದ್ರೆ ಸಾಕು, ತೂಕ ಹೆಚ್ಚಳವನ್ನು ಆರಾಮಾಗಿ ತಡೆಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಕುಳಿತುಕೊಳ್ಳುವುದಕ್ಕಿಂತ ನಿಂತುಕೊಂಡಿದ್ದರೆ ಹೆಚ್ಚಿನ ಕ್ಯಾಲೋರಿ ಬರ್ನ್ ಮಾಡಬಹುದು ಅನ್ನೋದು ಸಂಶೋಧನೆಯಲ್ಲಿ ದೃಢಪಟ್ಟಿದೆ. 1,184 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 46 ಬಗೆಯ ಪ್ರಯೋಗದ ಬಳಿಕ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.

ದಿನಕ್ಕೆ 6 ಗಂಟೆಗಳ ಕಾಲು ನಿಂತುಕೊಳ್ಳುವುದರಿಂದ ಕ್ಯಾಲೋರಿ ಬರ್ನ್ ಮಾಡಬಹುದು. ಜೊತೆಗೆ ಹಾರ್ಟ್ ಅಟ್ಯಾಕ್, ಸ್ಟ್ರೋಕ್, ಡಯಾಬಿಟಿಸ್ ಅನ್ನು ಕೂಡ ತಡೆಯಬಹುದು. ಸುಮ್ಮನೆ ನಿಲ್ಲುವ ಬದಲು ನಿಂತಲ್ಲೇ ದೇಹದಲ್ಲಿ ಸಣ್ಣಪುಟ್ಟ ಚಲನೆ ಮಾಡುವಂತೆ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಅಲ್ಲೇ ಎರಡು ಹೆಜ್ಜೆ ಹಿಂದೆ, ಮುಂದೆ ನಡೆಯವುದು. ದೇಹದ ಭಾರವನ್ನು ಒಂದಾದ ಮೇಲೊಂದು ಕಾಲಿನ ಮೇಲೆ ಹೇರುವುದು, ಕೈಗಳ ಚಲನೆ ಈ ರೀತಿಯ ಸಣ್ಣಪುಟ್ಟ ವ್ಯಾಯಾಮ ಮಾಡುವ ಮೂಲಕ ಬೊಜ್ಜನ್ನು ನಿವಾರಿಸಿಕೊಳ್ಳಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...