alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದಲ್ಲಿ ಕೇವಲ 7 ಬಾರಿ ಆಹಾರ ಸೇವಿಸ್ತಾನೆ ಈತ..!

without-food-1

ಸಾಮಾನ್ಯವಾಗಿ ನಾವು ದಿನದಲ್ಲಿ ನಾಲ್ಕರಿಂದ ಐದು ಬಾರಿ ಆಹಾರ ಸೇವನೆ ಮಾಡ್ತೇವೆ. ಇದು ನಮಗೆ ಶಕ್ತಿ ನೀಡುವ ಜೊತೆಗೆ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಆದ್ರೆ ಶ್ರೀಲಂಕಾದಲ್ಲಿರುವ ವ್ಯಕ್ತಿಯೊಬ್ಬ ಅಚ್ಚರಿ ಮೂಡಿಸಿದ್ದಾನೆ. ವರ್ಷದಲ್ಲಿ ಕೇವಲ 7 ಬಾರಿ ಮಾತ್ರ ಈತ ಆಹಾರ ಸೇವನೆ ಮಾಡ್ತಾನೆ.

ಶ್ರೀಲಂಕಾದ ನಿವಾಸಿಯ ಹೆಸರು ಕಿರ್ಬಿ ಡೆ Lanerolle. ಕಳೆದ ಐದು ವರ್ಷಗಳಿಂದ ಈ ರೂಢಿ ಬೆಳೆಸಿಕೊಂಡಿದ್ದಾನೆ ಕಿರ್ಬಿ. ಒಂದು ವರ್ಷದಲ್ಲಿ ಕೇವಲ 7 ಬಾರಿ ಮಾತ್ರ ಆಹಾರ ಸೇವನೆ ಮಾಡ್ತಾನೆ ಈತ. ಎಲ್ಲರಂತೆ ಕೆಲಸ ಮಾಡುವ ಈ ವ್ಯಕ್ತಿ ಹೆಚ್ಚಿನ ಸಮಯವನ್ನು ಗಾಳಿ, ಸೂರ್ಯನ ಬೆಳಕು, ನೀರಿರುವಲ್ಲಿ ಕಳೆಯುತ್ತಾನೆ. ಹಾಗಾಗಿ ಆತನಿಗೆ ಹಸಿವಾಗುವುದಿಲ್ಲವಂತೆ.

ದಿನಕ್ಕೆ 3-4 ಬಾರಿ ಆಹಾರ ಸೇವನೆ ಮಾಡಿದ್ರೆ ಆತನಿಗೆ ಆರೋಗ್ಯ ಹದಗೆಡುತ್ತದೆಯಂತೆ. ಹೆಚ್ಚು ಆಹಾರ ಸೇವನೆ ಮಾಡಿದ್ರೆ ಹೆಚ್ಚು ರೋಗ ಬರುತ್ತೆ ಎನ್ನುತ್ತಾನೆ ಈತ. ಸೂರ್ಯನ ಕಿರಣಗಳೇ ನನಗೆ ಸಾಕು ಎನ್ನುತ್ತಾನೆ ಕಿರ್ಬಿ. ವೈದ್ಯರು ಮೆಡಿಕಲ್ ಟೆಸ್ಟ್ ಮಾಡಿದ್ದಾರೆ. ಆದ್ರೆ ಆತನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆರೋಗ್ಯವಾಗಿದ್ದಾನೆಂಬ ವರದಿ ಬಂದಿದೆ. 2013 ರಲ್ಲಿ ಈತ ವಿಶ್ವದ ಜನರಿಗೆ ಅಚ್ಚರಿ ಮೂಡಿಸಿದ್ದು, ಸುದ್ದಿಯಾಗ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...