alex Certify
ಕನ್ನಡ ದುನಿಯಾ       Mobile App
       

Kannada Duniya

ಸೋಲಿನ ಹತಾಶೆಯಿಂದ ಇಂಥಾ ಕೆಲಸ ಮಾಡಿದ್ದಾರೆ ಲಂಕಾ ಫ್ಯಾನ್ಸ್

fans

ನಿನ್ನೆ ಡಂಬುಲಾದಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಣ ಮೊದಲನೆ ಏಕದಿನ ಪಂದ್ಯದ ವೇಳೆ ನಾಲ್ವರು ಭಾರತೀಯ ಮಹಿಳೆಯರ ಜೊತೆಗೆ ಲಂಕಾ ಬೆಂಬಲಿಗರು ದುರ್ವರ್ತನೆ ತೋರಿದ್ದಾರೆ. ಟೀಂ ಇಂಡಿಯಾದ ಆಟವನ್ನು ಅಭಿಮಾನಿಗಳು ಸಂಭ್ರಮಿಸ್ತಾ ಇದ್ರೆ, ಲಂಕಾ ಫ್ಯಾನ್ಸ್ ಸಿಟ್ಟಾಗಿದ್ದರು.

ಇದೇ ವಿಚಾರಕ್ಕೆ ಭಾರತದ ನಾಲ್ವರು ಮಹಿಳೆಯರು ಹಾಗೂ ಲಂಕಾ ಬೆಂಬಲಿಗರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಸೆಕೆಂಡ್ ಇನ್ನಿಂಗ್ಸ್ ಆರಂಭಕ್ಕೂ ಮುನ್ನ ಲಂಕಾ ಬೆಂಬಲಿಗರು, ಭಾರತದ ಮಹಿಳೆಯರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ತಡೆದಿದ್ದಾರೆ.

ಶ್ರೀಲಂಕಾ ತಂಡ ಮತ್ತೆ ಹೀನಾಯ ಸೋಲುಂಡಿರೋದ್ರಿಂದ ಅಭಿಮಾನಿಗಳು ನಿರಾಶರಾಗಿದ್ದಾರೆ. ಇದೇ ಕೋಪದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಚೇರಿಯ ಬೋರ್ಡ್ ಗೂ ಹಾನಿ ಮಾಡಿದ್ದಾರೆ. ಅಷ್ಟೇ ಅಲ್ಲ ಆಟಗಾರರು ಬಸ್ ಏರುವ ಸಮಯದಲ್ಲಿ ಧಿಕ್ಕಾರ ಕೂಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...