alex Certify
ಕನ್ನಡ ದುನಿಯಾ       Mobile App
       

Kannada Duniya

ಶ್ರೀಲಂಕಾದಲ್ಲಿ ಬೌದ್ಧರು-ಮುಸ್ಲಿಮರ ಸಂಘರ್ಷ, ತುರ್ತು ಪರಿಸ್ಥಿತಿ ಘೋಷಣೆ

ಶ್ರೀಲಂಕಾದಲ್ಲಿ ಕೋಮು ಸಂಘರ್ಷ ಭುಗಿಲೆದ್ದಿರುವುದರಿಂದ 10 ದಿನಗಳ ಕಾಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಶ್ರೀಲಂಕಾದ ಕ್ಯಾಂಡಿ ಜಿಲ್ಲೆಯಲ್ಲಿ ಬೌದ್ಧರು ಹಾಗೂ ಮುಸ್ಲಿಂರ ಮಧ್ಯೆ ಭಾರೀ ಘರ್ಷಣೆ ನಡೆದಿತ್ತು.

ಮುಸಲ್ಮಾನರು ಬಲವಂತವಾಗಿ ಬೌದ್ಧರನ್ನು ಮತಾಂತರ ಮಾಡುತ್ತಿದ್ದಾರೆ. ಬೌದ್ಧರ ಐತಿಹಾಸಿಕ ಸ್ಥಳಗಳನ್ನು ನಾಶ ಮಾಡುತ್ತಿದ್ದಾರೆ ಅನ್ನೋ ಆರೋಪವಿದೆ. ಶ್ರೀಲಂಕಾದಲ್ಲಿ ಮುಸ್ಲಿಂ ರೊಹಿಂಗ್ಯಾಗಳಿಗೆ ಆಸರೆ ನೀಡಬಾರದೆಂದು ಪ್ರತಿಭಟನೆಗಳು ನಡೆದಿದ್ದವು.

ಈ ಕೋಮು ಸಂಘರ್ಷ ದೇಶದ ಇತರ ಭಾಗಗಳಿಗೂ ಹರಡಿದ್ದರಿಂದ ತುರ್ತು ಸಭೆ ನಡೆಸಿದ ಸರ್ಕಾರ, 10 ದಿನಗಳ ಕಾಲ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದೆ. ಫೇಸ್ಬುಕ್ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ರೆ ಕ್ರಮ ಕೈಗೊಳ್ಳೋದಾಗಿ ಎಚ್ಚರಿಸಿದೆ.

ಕ್ಯಾಂಡಿ ಜಿಲ್ಲೆಯಲ್ಲಿ ಮುಸಲ್ಮಾನರಿಗೆ ಸೇರಿದ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಸಿಂಹಳೀ ಬೌದ್ಧರು ಹಾಗೂ ಅಲ್ಪಸಂಖ್ಯಾತ ಮುಸ್ಲಿಂರ ಮಧ್ಯೆ ಘರ್ಷಣೆ ತಾರಕಕ್ಕೇರಿರುವುದರಿಂದ ಅಲ್ಲಿ ಕರ್ಫ್ಯೂ ಹಾಕಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...