alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಪ್ರೇಮಿಯನ್ನು ಅಪಹರಿಸಿ ನಗ್ನವಾಗಿ ಕಾಡಿನಲ್ಲಿ ಬಿಟ್ಟ ಮಹಿಳೆಯರು

ಜರ್ಮನಿಯಲ್ಲಿ ವ್ಯಕ್ತಿಯೊಬ್ಬನಿಂದ ಮೋಸ ಹೋದ ಮಹಿಳೆಯರು ಒಟ್ಟಾಗಿ ಆತನ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಅವನನ್ನು ಅಪಹರಿಸಿ, ವಿವಸ್ತ್ರಗೊಳಿಸಿ ದಟ್ಟ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ. 44 ವರ್ಷದ ಲೊಥಾರಿಯೋ ಥಾಮಸ್ ಎಂಬಾತ ಪ್ರೇಯಸಿಗಾಗಿ ಪತ್ನಿಗೆ ಕೈಕೊಟ್ಟಿದ್ದ.

ನಂತರ ಪ್ರೇಯಸಿಯನ್ನೂ ತೊರೆದು ಇನ್ನೊಬ್ಬಳ ಸಂಗ ಬೆಳೆಸಿದ್ದ. ಥಾಮಸ್ ನಿಂದ ಮೋಸ ಹೋಗಿದ್ದ ಯವೊನೆ ಷ್ಮಿಡ್ಟ್ ಹಾಗೂ ಬ್ರೈಟ್ ಕೋಯಿಂಗ್ ಜೊತೆಯಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್ ಹಾಕಿದ್ದಾರೆ. ನಾಲ್ವರಿಗೆ ಸುಪಾರಿ ಕೊಟ್ಟು ಥಾಮಸ್ ನನ್ನು ಕಿಡ್ನಾಪ್ ಮಾಡಿಸಿದ್ದಾರೆ.

ನಂತರ ಅವನ ಬಟ್ಟೆ ಬಿಚ್ಚಿಸಿ ಬಾಯಿಗೆ ಟೇಪ್ ಅಂಟಿಸಿ, ಕಣ್ಣಿಗೆ ಕೂಡ ಪಟ್ಟಿ ಕಟ್ಟಿ ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿಯೇ ಬಿಟ್ಟು ಬಂದಿದ್ದಾರೆ. ಸುಮಾರು ನೂರು ಬಾರಿ ಇಬ್ಬರೂ ಸೇರಿ ತನ್ನನ್ನು ಥಳಿಸಿದ್ದಾರೆ ಅಂತಾ ಥಾಮಸ್ ಆರೋಪಿಸಿದ್ದಾನೆ.

ತೀವ್ರ ಗಾಯಗೊಂಡಿದ್ದ ಥಾಮಸ್, ನಗ್ನವಾಗಿಯೇ ಪೊಲೀಸ್ ಠಾಣೆಗೆ ಓಡಿ ಬಂದಿದ್ದ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯ್ತು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಮುಂದಿನ ತಿಂಗಳು ತೀರ್ಪು ಹೊರಬೀಳುವ ನಿರೀಕ್ಷೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...