alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಳಗದಲ್ಲಿ ಹಾವನ್ನೇ ಕೊಂದ ಜೇಡ..!!

snake

ಕೆಲವೊಮ್ಮೆ ಅಚ್ಚರಿಯ ಘಟನೆಗಳು ನಡೆಯುತ್ತವೆ. ಅವನ್ನು ನಂಬಲು ಸಾಧ್ಯವಾಗದಿದ್ದರೂ ನಂಬಲೇಬೇಕಾಗುತ್ತದೆ. ಏಕೆಂದರೆ ಅವು ನೈಜವಾಗಿರುತ್ತವೆ. ಹೀಗೆ ನಂಬಲಸಾಧ್ಯವಾದ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ. ಜೇಡವೊಂದು ಹಾವನ್ನೇ ಕೊಂದು ಹಾಕಿದೆ.

ಹೌದು, ಜೇಡ ಹಾವನ್ನೇ ಕೊಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಆಸ್ಟ್ರೇಲಿಯಾದ ಸೌತ್ ವೇಲ್ಸ್ ಸಮೀಪ ವಿಷಕಾರಿ ಹಾವೊಂದನ್ನು ಜೇಡ ಕೊಂದು ಹಾಕಿದೆ. ಜೇಡ ವಿಷಕಾರಿಯಾಗಿರಲಿಲ್ಲ. ಆದರೆ, ಹಾವು ಮಾತ್ರ ವಿಷಪೂರಿತವಾಗಿತ್ತು. ಈ ಎರಡೂ ಜೀವಿಗಳು ಕಾದಾಟ ನಡೆಸಿ ಕೊನೆ ಜೇಡವೇ ಹಾವನ್ನು ಕೊಂದು ಹಾಕಿದೆ. ಸೌತ್ ವೇಲ್ಸ್ ಸಮೀಪದಲ್ಲಿ ನಡೆದ ಈ ಹಾವು, ಜೇಡದ ಕಾಳಗವನ್ನು ಕಂಡ ವ್ಯಕ್ತಿಯೊಬ್ಬರು, ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಈ ದೃಶ್ಯಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅದನ್ನು ಅಪಾರ ಸಂಖ್ಯೆಯ ಜನ ವೀಕ್ಷಿಸಿ, ಲೈಕ್ ಮಾಡಿದ್ದಾರೆ. ಈ ಜೇಡ ಸ್ಪೈಡರ್(ದಾರ)ನಿಂದ ಹಾವನ್ನು ಕಟ್ಟಿಹಾಕಿದೆ. ಬಳಿಕ ಹಾವು ಮೃತಪಟ್ಟಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ನಂಬಲಸಾಧ್ಯವಾದ ಘಟನೆಯೊಂದು ಸಖತ್ ಸುದ್ದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...