alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ಜೈಲಿನ ನಂತ್ರ ಭಾರತ ಜೈಲಿನಲ್ಲಿ ಕಂಬಿ ಎಣಿಸಲಿದ್ದಾನೆ ಪತ್ನಿ ಹಂತಕ

ಮೊದಲ ಬಾರಿ ಅಪರಾಧಿಯೊಬ್ಬನನ್ನು ವಿದೇಶದಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗ್ತಿದೆ. ನವೆಂಬರ್ 16,2009 ರಲ್ಲಿ ಲಂಡನ್ ನಲ್ಲಿ ಪತ್ನಿ ಗೀತಾಳನ್ನು ಹರ್ಪ್ರೀತ್ ಹತ್ಯೆ ಮಾಡಿದ್ದ. ವಿಚಾರಣೆ ನಡೆಸಿದ್ದ ಕೋರ್ಟ್ 28 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈಗಾಗಲೇ 8 ವರ್ಷ ಜೈಲಿನಲ್ಲಿ ಕಳೆದಿರುವ ಹರ್ಪ್ರೀತ್ ಇನ್ನೂ 20 ವರ್ಷವನ್ನು ಅಮೃತಸರ ಜೈಲಿನಲ್ಲಿ ಕಳೆಯಲಿದ್ದಾನೆ.

ಹರ್ಪ್ರೀತ್ ಉಳಿದ 20 ವರ್ಷಗಳನ್ನು ಭಾರತೀಯ ಜೈಲಿನಲ್ಲಿ ಕಳೆಯುವುದಾಗಿ ವಿನಂತಿ ಮಾಡಿಕೊಂಡಿದ್ದನಂತೆ. ಇದಕ್ಕೆ ಭಾರತ ಸರ್ಕಾರ ಹಾಗೂ ಲಂಡನ್ ಸರ್ಕಾರ ಒಪ್ಪಿದೆ. ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಮೂಲಕ ಖೈದಿಯನ್ನು ಅಮೃತಸರ ಜೈಲಿಗೆ ಕರೆತರಲಾಗುವುದು.

ನವೆಂಬರ್ 16,2009 ರಲ್ಲಿ ಹರ್ಪ್ರೀತ್ ಪತ್ನಿ ಹತ್ಯೆ ಮಾಡಿದ್ದ. ಆಗ ಆತನ ವಯಸ್ಸು 32 ವರ್ಷವಾಗಿತ್ತು. ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಏಷ್ಯನ್ ರೆಡಿಯೋ ಕೇಂದ್ರದಲ್ಲಿ ರಿಸೆಪ್ಶನ್ ಆಗಿದ್ದ ಗೀತಾ ಹತ್ಯೆಗೆ ಹರ್ಪ್ರೀತ್ ಇಬ್ಬರಿಗೆ ಸುಪಾರಿ ನೀಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...