alex Certify
ಕನ್ನಡ ದುನಿಯಾ       Mobile App
       

Kannada Duniya

ಜಪಾನಿನಲ್ಲಿ ಬೆಕ್ಕುಗಳಿಗಾಗಿ ಓಡ್ತು ವಿಶೇಷ ಟ್ರೈನ್

ಜಪಾನಿನ ಜನರು ಬೆಕ್ಕನ್ನು ತುಂಬಾ ಇಷ್ಟಪಡ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಜಪಾನ್ ಜನರು ಭಾನುವಾರ ಬೆಕ್ಕುಗಳಿಗಾಗಿ ವಿಶೇಷ ರೈಲು ಓಡಿಸಿ ಈ ಮಾತನ್ನು ಸಾಬೀತುಪಡಿಸಿದ್ದಾರೆ. ಕೇಂದ್ರ ಜಪಾನ್ ನ ಒಗಾಕಿ ಜನರು ರೈಲ್ವೆ ಇಲಾಖೆ ಜೊತೆ ಸೇರಿ ಒಂದು ವಿಶೇಷ ಟ್ರೈನ್ ಓಡಿಸಲು ಮುಂದಾದ್ರು. ಇದ್ರಲ್ಲಿ ಮೊದಲ ದಿನವೇ 40 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು. 40 ಪ್ರಯಾಣಿಕರಲ್ಲಿ 30 ಪ್ರಯಾಣಿಕರು ಬೆಕ್ಕಿನ ಜೊತೆ ಪ್ರಯಾಣ ಬೆಳೆಸಿದ್ದು ವಿಶೇಷವಾಗಿತ್ತು.

ಬೆಕ್ಕುಗಳ ರಕ್ಷಣೆ ಉದ್ದೇಶದಿಂದ ಈ ವಿಶೇಷ ಟ್ರೈನ್ ಬಿಡಲಾಗಿತ್ತು. ಬೆಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಇದ್ರ ಉದ್ದೇಶವಾಗಿತ್ತು. ಬೆಕ್ಕುಗಳ ಹತ್ಯೆ ತಡೆಯಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದ್ರಿಂದ ಬಂದ ಹಣವನ್ನು ಬೆಕ್ಕುಗಳ ರಕ್ಷಣೆಗೆ ಮೀಸಲಿಡಲಾಗಿದೆ. ಪ್ರಯಾಣಿಕರು ಬೆಕ್ಕುಗಳ ಜೊತೆ ಪ್ರಯಾಣ ಬೆಳೆಸಿ ಎಂಜಾಯ್ ಮಾಡಿದ್ರು.

2004ರಲ್ಲಿ ಜಪಾನಿನಲ್ಲಿ 237,246 ಬೆಕ್ಕುಗಳಿದ್ದವು. 2016ರಲ್ಲಿ ಜಪಾನ್ ನಲ್ಲಿ ಬೆಕ್ಕುಗಳ ಸಂಖ್ಯೆ 72,624ರಷ್ಟಕ್ಕಿಳಿದಿದೆ. ಬೆಕ್ಕುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಆತಂಕ ಸೃಷ್ಟಿಸಿದೆ. ಸದ್ಯ 9.8 ಮಿಲಿಯನ್ ಬೆಕ್ಕುಗಳಿವೆ. ಹಾಗಾಗಿ ಬೆಕ್ಕುಗಳ ರಕ್ಷಣೆಗೆ ಜಪಾನ್ ಮಹತ್ವ ನೀಡಿದೆ. ರೈಲ್ವೆ ಇಲಾಖೆ ಹಾಗೂ ಸರ್ಕಾರೇತರ ಸಂಸ್ಥೆಯೊಂದು ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...