alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೇನ್ ನ ಈ ಚಿಲ್ಲರೆ ವ್ಯಾಪಾರಿ ವಿಶ್ವದ ಅತ್ಯಂತ ಶ್ರೀಮಂತ

ವಿಶ್ವದ ಅತಿ ಶ್ರೀಮಂತ ಎನಿಸಿಕೊಂಡಿದ್ದ ಬಿಲ್ ಗೇಟ್ಸ್ ರನ್ನು ಸ್ಪೇನ್ ನ ಚಿಲ್ಲರೆ ವ್ಯಾಪಾರಿಯೊಬ್ಬ ಹಿಂದಿಕ್ಕಿದ್ದಾನೆ. ಇಂಡಿಟೆಕ್ಸ್ ಕಂಪನಿಯ ಸಹ ಸಂಸ್ಥಾಪಕ ಅಮಾಂಕಿಯೋ ಒರ್ಟೆಗ ಈಗ ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ. ಈತನ ಆಸ್ತಿ 200 ಮಿಲಿಯನ್ ಡಾಲರ್ ದಾಟಿದೆ.

2 ದಿನಗಳ ಹಿಂದಷ್ಟೆ ಅಮಾಂಕಿಯೋ, ಬಿಲ್ ಗೇಟ್ಸ್ ರನ್ನು ಹಿಂದಿಕ್ಕಿದ್ದಾನೆ. ಇಂಡಿಟೆಕ್ಸ್,  ಫ್ಯಾಷನ್ ಬ್ರಾಂಡ್ ಝಾರಾ ಕಂಪನಿಯ ಮಾತೃ ಸಂಸ್ಥೆ. ಅಮಾಂಕಿಯೋಗೆ ಈಗ 81ರ ಹರೆಯ. ಆತನ ಒಟ್ಟಾರೆ ಆಸ್ತಿ ಮೌಲ್ಯ 85 ಬಿಲಿಯನ್ ಡಾಲರ್ ಅಂತಾ ಫೋರ್ಬ್ಸ್ ಮ್ಯಾಗಝೀನ್ ವರದಿ ಮಾಡಿದೆ.

ಈ ಮೂಲಕ ಅಮಾಂಕಿಯೋ, ಬಿಲ್ ಗೇಟ್ಸ್ ಹಾಗೂ ಜೆಫ್ ಬೆಜೋಸ್ ಇಬ್ಬರನ್ನೂ ಹಿಂದಿಕ್ಕಿದ್ದಾನೆ. ಕಳೆದ ತಿಂಗಳು ಅಮೆಜಾನ್ ಷೇರುಗಳ ಬೆಲೆ ದಾಖಲೆಯ ಕುಸಿತ ಕಂಡಿದ್ದರಿಂದ ಜೆಫ್ ಬೆಜೋಸ್ ರ ಆಸ್ತಿ ಮೌಲ್ಯ ಕೂಡ 4 ಬಿಲಿಯನ್ ಡಾಲರ್ ನಷ್ಟು ಕಡಿಮೆಯಾಗಿತ್ತು. ಇನ್ನೊಂದೆಡೆ ಬಿಲ್ ಗೇಟ್ಸ್, ತಮ್ಮ ಆಸ್ತಿಯಲ್ಲಿ 4.6 ಬಿಲಿಯನ್ ಡಾಲರ್ ಮೌಲ್ಯದ ಮೈಕ್ರೋಸಾಫ್ಟ್ ಷೇರುಗಳನ್ನು ದಾನ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...