alex Certify
ಕನ್ನಡ ದುನಿಯಾ       Mobile App
       

Kannada Duniya

ಟೋಮೋಟೋ ಹಬ್ಬದಲ್ಲಿ ಮಿಂದೇಳ್ತಿದ್ದಾರೆ ಜನ

ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಸಂಸ್ಕೃತಿ, ಹಬ್ಬ, ಉತ್ಸವಗಳನ್ನು ಮಾಡುತ್ತದೆ. ಕೆಲ ದೇಶಗಳಲ್ಲಿ ಚಿತ್ರ-ವಿಚಿತ್ರ ಆಚರಣೆಗಳು ಜಾರಿಯಲ್ಲಿವೆ. ಇದಕ್ಕೆ ಸ್ಪೇನ್ ಕೂಡ ಹೊರತಾಗಿಲ್ಲ. ಸ್ಪೇನ್ ನಲ್ಲಿ ಟೋಮೋಟೋ ಫೈಟ್ (ಟೋಮೋಟೋ ಉತ್ಸವ) ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ. ಈ ವರ್ಷ ಕೂಡ  ಸ್ಪೇನ್ ನಲ್ಲಿ ಟೋಮೋಟೋ ಉತ್ಸವ ಆರಂಭವಾಗಿದೆ.

ಆಗಸ್ಟ್ ತಿಂಗಳ ಕೊನೆ ಬುಧವಾರ ಈ ಉತ್ಸವಕ್ಕೆ ಚಾಲನೆ ಸಿಗುತ್ತದೆ. ಪ್ರಸಿದ್ಧವಾಗಿರುವ ಈ ಟೋಮೋಟೋ ಉತ್ಸವದಲ್ಲಿ ಮಿಂದೇಳಲು ವಿದೇಶಗಳಿಂದ ಜನರು ಬರ್ತಾರೆ. ಈ ಉತ್ಸವಕ್ಕಾಗಿ 250,000 ಪೌಂಡ್ ಟೋಮೋಟೋವನ್ನು ಬಳಸಲಾಗುತ್ತದೆಯಂತೆ.

ಉತ್ಸವದಲ್ಲಿ ಪಾಲ್ಗೊಳ್ಳುವ ಜನರು ಟೋಮೋಟೋದಲ್ಲಿ ಹೊಡೆದಾಡಿಕೊಂಡು ಎಂಜಾಯ್ ಮಾಡ್ತಾರೆ. ಈ ಹಬ್ಬವನ್ನು ಹಿಂಸಾತ್ಮಕವಾಗಿ ಆಚರಿಸುವುದಿಲ್ಲ. ಟೋಮೋಟೋ ದಾಳಿ ವೇಳೆ ಗಾಯವಾಗದಿರಲಿ ಎನ್ನುವ ಕಾರಣಕ್ಕೆ ಟೋಮೋಟೋವನ್ನು ಹಿಸುಕಿ ನಂತ್ರ ಬೇರೆಯವರಿಗೆ ಹೊಡೆಯುತ್ತಾರೆ.

ಇದ್ರ ಆರಂಭ 1945ರಲ್ಲಾಗಿತ್ತು. ಕೆಲ ಯುವಕರು ಪ್ರತಿಭಟನೆ ಮಾಡ್ತಿದ್ದರು. ಪೊಲೀಸರು ಪ್ರತಿಭಟನೆ ತಡೆಗೆ ಮುಂದಾಗಿದ್ದರು. ಆಗ ಪೊಲೀಸ್ ಮೇಲೆ ಪ್ರತಿಭಟನಾಕಾರರು ಟೋಮೋಟೋ ದಾಳಿ ನಡೆಸಿದ್ದರು. ಅಲ್ಲಿಂದ ಇದೊಂದು ಹಬ್ಬವಾಗಿ ಆಚರಣೆಗೆ ಬಂತು. ಲಾ ಟೋಮೆಟಿನಾ ಹೆಸರಿನಲ್ಲಿ ಇದನ್ನು ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಪ್ರವಾಸೋದ್ಯಮ ಹಬ್ಬವಾಗಿ ಇದು ಪ್ರಸಿದ್ಧಿ ಪಡೆದಿದೆ. ಬಾಲಿವುಡ್ ಸಿನಿಮಾಗಳಲ್ಲೂ ಇದನ್ನು ತೋರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...