alex Certify
ಕನ್ನಡ ದುನಿಯಾ       Mobile App
       

Kannada Duniya

‘ಇಹಲೋಕ’ ತ್ಯಜಿಸಿದ ವಿಶ್ವದ ಹಿರಿಯಜ್ಜ

ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಫ್ರಾನ್ಸಿಸ್ಕೋ ನುನೆಜ್ ಒಲಿವೆರಾ ಇನ್ನಿಲ್ಲ. ಸೋಮವಾರ ಫ್ರಾನ್ಸಿಸ್ಕೋ ಇಹಲೋಕ ತ್ಯಜಿಸಿದ್ದಾರೆ. ಇವರಿಗೆ 113 ವರ್ಷ ವಯಸ್ಸಾಗಿತ್ತು. ಜಗತ್ತಿನ ಅತಿ ಹಿರಿಯ ವ್ಯಕ್ತಿಯ ನಿಧನದ ಹಿನ್ನೆಲೆಯಲ್ಲಿ ಸ್ಪೇನ್ ನಲ್ಲಿ ಒಂದು ದಿನದ ಶೋಕಾಚರಣೆ ಮಾಡಲಾಗಿದೆ.

ತಿಂಗಳ ಹಿಂದಷ್ಟೆ ಈ ಹಿರಿಯಜ್ಜ 113ನೇ ವರ್ಷಕ್ಕೆ ಕಾಲಿಟ್ಟಿದ್ದರು. ಸ್ಪೇನ್ ನ ಬೀನ್ವೆನಿಡಾ ಎಂಬ ಗ್ರಾಮದಲ್ಲಿ ಈತ ನೆಲೆಸಿದ್ದರು. 1904ರ ಡಿಸೆಂಬರ್ 13ರಂದು ಜನಿಸಿದ್ದ ಫ್ರಾನ್ಸಿಸ್ಕೋ, ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದರು. ತನ್ನದೇ ಹೊಲದಲ್ಲಿ ಬೆಳೆದ ತರಕಾರಿಗಳನ್ನು ಸೇವಿಸುತ್ತಿದ್ದರು.

ಜೊತೆಗೆ ದಿನಕ್ಕೊಂದು ಗ್ಲಾಸ್ ವೈನ್ ಹೀರುತ್ತಿದ್ದು, ಇದೇ ಅವರ ದೀರ್ಘಾಯುಷ್ಯದ ಗುಟ್ಟಾಗಿತ್ತು. ಪ್ರತಿದಿನ ಬೆಳಗಿನ ತಿಂಡಿಗೆ ಒಂದು ಲೋಟ ಹಾಲು ಹಾಗೂ ಆಲಿವ್ ಆಯಿಲ್ ಹಾಕಿ ತಯಾರಿಸಿದ ಸ್ಪಾಂಜ್ ಕೇಕ್ ತಿನ್ನುತ್ತಿದ್ದರಲ್ಲದೇ 107 ವರ್ಷಗಳವರೆಗೂ ಪ್ರತಿನಿತ್ಯ ಬೆಳಕ್ಕೆ ವಾಕಿಂಗ್ ಮಾಡುತ್ತಿದ್ದರು.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...