alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೇನ್ ನಲ್ಲಿ ಏಳು ಶಂಕಿತ ಐಸಿಸ್ ಉಗ್ರರ ಆರೆಸ್ಟ್

160207105110-spain-terror-arrest-exlarge-169

ಜಗತ್ತಿನಾದ್ಯಂತ ಇದೀಗ ಐಸಿಸ್ ಉಗ್ರರ ಕರಿ ಛಾಯೆ ಬೀಳತೊಡಗಿದ್ದು, ಈ ನಡುವೆಯೇ ಸ್ಪೇನ್‌ ನ ಹಲವೆಡೆ ದಾಳಿ ನಡೆಸಿರುವ ಪೊಲೀಸರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಏಳು ಮಂದಿ ಶಂಕಿತ ಐಸಿಸ್ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಲ್ಲಿನ ಅಲಿಕಂಟೆ ಮತ್ತು ವಲೆನ್ಷಿಯಾ ಹಾಗೂ ಉತ್ತರ ಆಫ್ರಿಕ ಎನ್‌ ಕ್ಲೇವ್‌ ನ ಸಿಯುಟಾ ನಗರಗಳಲ್ಲಿ ಪೊಲೀಸರು ದಾಳಿ ನಡೆಸಿದ್ದು, ಈ ಸಮಯದಲ್ಲಿ ಸಿರಿಯಾ, ಇರಾಕ್‌ ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಕಂಪ್ಯೂಟರ್ ಉಪಕರಣಗಳು, ಸ್ಫೋಟಕ ತಯಾರಿಕೆ ವಸ್ತುಗಳು, ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುವ ಕೃತ್ಯದಲ್ಲಿ ತೊಡಗಿದ್ದ ಏಳು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.

ಆಘಾತಕಾರಿ ವಿಷಯವೆಂದರೆ ಈ ಎಲ್ಲ ಬಂಧಿತರು ಮಾನವೀಯ ನೆರವು ಹಾಗೂ ಪರಿಹಾರ ಸಾಮಗ್ರಿಗಳನ್ನು ಸಂತ್ರಸ್ತರಿಗೆ ಕಳುಹಿಸುವ ರೀತಿಯಲ್ಲಿ ಪ್ಯಾಕ್‌ ಮಾಡಿ ಸೀಲ್ ಹಾಕಿ ಸಿರಿಯಾದಲ್ಲಿನ ಐಸಿಸ್ ಉಗ್ರರಿಗೆ ರವಾನಿಸುತ್ತಿದ್ದರು ಎನ್ನಲಾಗಿದ್ದು, ಈ ಕೃತ್ಯದಲ್ಲಿ ಇನ್ನಷ್ಟು ಮಂದಿ ಇರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...