alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಮಹಿಳೆ ಮುಂದೆ ವಿಮಾನದಲ್ಲೇ ಪ್ರಯಾಣಿಕನಿಂದ ಹಸ್ತಮೈಥುನ

ಅಮೆರಿಕಾದ ಸೌತ್ ವೆಸ್ಟ್ ಏರ್ಲೈನ್ಸ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಲಾಸ್ ವೆಗಾಸ್ ನಿಂದ ಫಿಲಿಡೆಲ್ಫಿಯಾಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವನೊಬ್ಬ, ಮಹಿಳೆ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದಾನೆ.

ಎಲಿ ಶರಿಯಾದ್ ಎಂಬ ಮಹಿಳೆ, ವಿಮಾನ ಪ್ರಯಾಣದಲ್ಲಿ ತನಗಾದ ಕಹಿ ಅನುಭವದ ಕುರಿತು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಲ್ಲದೆ ಪೊಲೀಸರಿಗೂ ದೂರು ನೀಡಿದ್ದಾರೆ.

ಈಕೆಯ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕ, ಹೆಡ್ ಫೋನ್ ಬಳಸದೆ ತನ್ನ ಐಪಾಡ್ ನಲ್ಲಿ ನೀಲಿಚಿತ್ರ ವೀಕ್ಷಿಸಿದ್ದು, ಬಳಿಕ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲ, ನಂತರ ಮಹಿಳೆಗೆ ನಿಮಗೆ ಮನೋರಂಜನೆ ಸಿಕ್ಕಿತಾ ಎಂದು ಪ್ರಶ್ನಿಸಿದ್ದಾನೆ.

ಸರಣಿ ಟ್ವೀಟ್ ಗಳಲ್ಲಿ ಎಲಿ ಶರಿಯಾದ್ ಈ ಎಲ್ಲ ವಿಚಾರವನ್ನು ತೆರೆದಿಟ್ಟಿದ್ದು, ಇದು ಸೌತ್ ವೆಸ್ಟ್ ಏರ್ಲೈನ್ಸ್ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಆಕೆಯ ಕ್ಷಮೆ ಯಾಚಿಸಿದ್ದಾರೆ. ವಿಮಾನದಲ್ಲಿದ್ದ ತನ್ನ ಸಿಬ್ಬಂದಿ, ಮಹಿಳೆ ನೆರವಿಗೆ ಧಾವಿಸದಿರುವ ಕುರಿತು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...