alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ತವ್ಯದ ವೇಳೆ ಸಾವನ್ನಪ್ಪಿದ ಶ್ವಾನಕ್ಕೆ ವಿಶೇಷ ಗೌರವ

ದಕ್ಷಿಣ ಕೊರಿಯ: ಕಳೆದ 6 ವರ್ಷಗಳಿಂದ ವಿವಿಧ ಪ್ರಕರಣಗಳನ್ನು ಬೇಧಿಸಲು ಸಹಕಾರಿಯಾಗಿದ್ದ ದಕ್ಷಿಣ ಕೊರಿಯ ಪೊಲೀಸ್‌ ಶ್ವಾನದಳದ ಲರಿ ನಾಯಿ ಕರ್ತವ್ಯದ ವೇಳೆ ಸಾವನ್ನಪ್ಪಿದೆ.

ವಿಶ್ವದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮರಣಿಸಿದ ಮೊದಲ ಶ್ವಾನ ಎಂಬ ದಾಖಲೆಗೆ ಲರಿ ಪಾತ್ರವಾಗಿದೆ. ದಕ್ಷಿಣ ಕೊರಿಯ ಪೊಲೀಸರಿಗೆ ಹಲವಾರು ಪ್ರಕರಣಗಳನ್ನು ಬೇಧಿಸುವಲ್ಲಿ ಸಹಾಯಕನಾಗಿದ್ದ ನಾಯಿಗೆ, ಗೌರವ ಸೂಚಿಸುವ ಸಲುವಾಗಿ ಮುಂದಿನ ತಿಂಗಳು ವಿಶೇಷ ಹಾಗೂ ಅಪರೂಪದ ಕಾರ್ಯಕ್ರಮ ಆಯೋಜಿಸಲಾಗಿದೆ. ಬುದ್ಧಿಶಾಲಿ ನಾಯಿಯ ಸ್ಮರಣಾರ್ಥ ಲರಿ ಕಂಚಿನ ಪ್ರತಿಮೆ ಅನಾವರಣಗೊಳ್ಳಲಿದೆ.

ಗುಡ್ಡ ಪ್ರದೇಶದಲ್ಲಿ ಕಾಣೆಯಾಗಿದ್ದ ವ್ಯಕ್ತಿಯೋರ್ವನನ್ನು ಹುಡುಕುವ ವೇಳೆ ಹಾವು ಕಚ್ಚಿ ನಾಯಿ ಕೊನೆಯುಸಿರೆಳೆದಿತ್ತು. ಜರ್ಮನ್‌ ಶಫರ್ಡ್‌ ಜಾತಿಗೆ ಸೇರಿದ ಲರಿ ಅತ್ಯಂತ ಚುರುಕಾಗಿತ್ತು. ಈವರೆಗೆ 39 ಅಪರಾಧ ಪ್ರಕರಣ, 170 ಕಾಣೆಯಾದ ಪ್ರಕರಣಗಳಲ್ಲಿ ಭಾಗಿಯಾಗಿ, ಪೊಲೀಸರಿಗೆ ಮಹತ್ವದ ಸುಳಿವುಗಳನ್ನು ನೀಡಿತ್ತು. ಕೊಲೆಯಾಗಿದ್ದ ಮಹಿಳೆಯೋರ್ವಳ ದೇಹವನ್ನು ಹುಡುಕಿ, ಪ್ರಕರಣವನ್ನು ಬೇಧಿಸಲು ಲರಿ ನೀಡಿದ ಸುಳಿವು ಮಹತ್ವದ್ದಾಗಿತ್ತು ಎಂದು ಪೊಲೀಸರು ಲರಿ ಕರ್ತವ್ಯ ನಿಷ್ಠೆಯನ್ನು ಸ್ಮರಿಸಿದ್ದಾರೆ.

ಸ್ವರ್ಗದಲ್ಲಿ ನಿರಾಳವಾಗಿ ಓಡಾಡಿಕೊಂಡಿರು ಎಂಬ ಶೀರ್ಷಿಕೆಯೊಂದಿಗೆ ಲರಿ ಫೋಟೋ ಹಾಕಲಾಗಿದೆ. ದಕ್ಷಿಣ ಕೊರಿಯಾದ ಪೊಲೀಸ್‌ ಕಚೇರಿಯಲ್ಲಿ ಲರಿಯ ಕಂಚಿನ ಪ್ರತಿಮೆ ಸ್ಥಾಪಿಸಲು ಪೊಲೀಸ್‌ ಇಲಾಖೆ ಮುಂದಾಗಿದ್ದು, ಸೆಪ್ಟೆಂಬರ್‌ನಲ್ಲಿ ಅನಾವರಣಗೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...