alex Certify
ಕನ್ನಡ ದುನಿಯಾ       Mobile App
       

Kannada Duniya

1 ಲಕ್ಷ ಇಲಿ ನಿರ್ನಾಮಕ್ಕೆ 100 ಕೋಟಿ ರೂಪಾಯಿ ಖರ್ಚು

ಭಾರತದ ಅನೇಕ ಕಡೆ ಇಲಿಯನ್ನು ಗಣೇಶನ ವಾಹನವೆಂದು ಪೂಜಿಸಲಾಗುತ್ತದೆ. ಈ ಇಲಿಗಳಿಂದ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತದೆ. ಹಣ್ಣು, ಧಾನ್ಯ ಸೇರಿದಂತೆ ಅನೇಕ ಆಹಾರ ವಸ್ತುಗಳನ್ನು ಇಲಿಗಳು ಹಾಳು ಮಾಡ್ತಿವೆ. ಬ್ರಿಟನ್ ನಲ್ಲಿ ಕೂಡ ಇಲಿಗಳು ಆತಂಕ ಸೃಷ್ಟಿಸಿವೆ. ಇಲ್ಲಿನ ದ್ವೀಪವೊಂದರ ಜೀವವೈವಿದ್ಯತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ದಕ್ಷಿಣ ಜಾರ್ಜಿಯಾ ದ್ವೀಪದಲ್ಲಿ ಇಲಿಗಳಿಂದಾಗಿ 10 ದಶಲಕ್ಷವಿದ್ದ ಸೀ ಬರ್ಡ್ ಸಂಖ್ಯೆ 10 ಲಕ್ಷಕ್ಕಿಳಿದಿದೆ. ವಿಶ್ವದ ಶೇಕಡಾ 81ರಷ್ಟು ಸೀ ಬರ್ಡ್ ಗಳು ಈ ದ್ವೀಪದಲ್ಲಿವೆ. 1775 ರಲ್ಲಿ ಕ್ಯಾಪ್ಟನ್ ಕುಕ್ ಈ ದ್ವೀಪವನ್ನು ಪತ್ತೆ ಹಚ್ಚಿದ್ದರು. ಅಲ್ಲಿಂದ ಹಡಗಿನ ಮೂಲಕ ಇಲಿಗಳು ದ್ವೀಪಕ್ಕೆ ಬರಲು ಶುರು ಮಾಡಿದ್ವು. ಒಂದು ಮಾಹಿತಿ ಪ್ರಕಾರ 1 ಲಕ್ಷಕ್ಕೂ ಹೆಚ್ಚು ಇಲಿಗಳು ದ್ವೀಪದಲ್ಲಿದ್ದವು.

ಇಲಿಗಳ ಹಾವಳಿಯಿಂದ ಅಪರೂಪದ ಪಕ್ಷಿ, ಪ್ರಾಣಿ ಅದ್ರ ಮೊಟ್ಟೆಗಳು ನಾಶವಾಗ್ತಾ ಬಂದಿದ್ದವು. ಇದ್ರಿಂದ ಭಯಗೊಂಡ ಸರ್ಕಾರ 2011ರಲ್ಲಿ ಇಲಿ ನಿರ್ಮೂಲನೆ ಅಭಿಯಾನ ಶುರು ಮಾಡ್ತು. ಸತತ 7 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಿ ಇಲಿಗಳ ಸರ್ವನಾಶ ಮಾಡಿದೆ. 200 ವರ್ಷಗಳ ನಂತ್ರ ಇದೇ ಮೊದಲ ಬಾರಿ ಈ ದ್ವೀಪ ಇಲಿಗಳಿಂದ ಮುಕ್ತವಾಗಿದೆ.

ಇಲಿಗಳ ನಾಶಕ್ಕೆ ಹೆಲಿಕ್ಯಾಪ್ಟರ್ ಒಂದನ್ನೂ ಬಳಸಲಾಗಿತ್ತು. 100 ಕೋಟಿ ರೂಪಾಯಿಯನ್ನು ಸರ್ಕಾರ ಇಲಿ ನಾಶಕ್ಕೆ ಖರ್ಚು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...