alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಕಿನಿ ಫೋಟೋ ಹಾಕಲ್ಲ ಎಂದ ತಕ್ಷಣ ಈ ಕೆಲಸ ಮಾಡಿದ್ರು 70 ಸಾವಿರ ಮಂದಿ…!

ಸಾಮಾಜಿಕ ಜಾಲತಾಣದಲ್ಲಿ ಎಲ್ಲ ರೀತಿಯ ವ್ಯಕ್ತಿಗಳೂ ಸಿಗ್ತಾರೆ. ಪ್ರತಿ ಕ್ಷಣದ ಆಗು-ಹೋಗುಗಳನ್ನು ಹಂಚಿಕೊಳ್ಳುವವರಿದ್ದಾರೆ. ಫಿಟ್ನೆಸ್, ಫ್ಯಾಷನ್, ಬ್ಯೂಟಿ, ಅಡುಗೆ, ಆರೋಗ್ಯ ಹೀಗೆ ಬೇರೆ ಬೇರೆ ವಿಷ್ಯಗಳ ಬಗ್ಗೆ ಆಸಕ್ತರು ಚರ್ಚೆ ಮಾಡ್ತಾರೆ. ಆದ್ರೆ ಸೆಕ್ಸಿ ಹಾಗೂ ಬೋಲ್ಡ್ ಫೋಟೋಗಳಿಗೆ ಹೆಚ್ಚು ಲೈಕ್ ಸಿಗೋದು ಸಾಮಾನ್ಯ ಸಂಗತಿ.

ಕಲಾವಿದರಿಗಿಂತ ಪೋರ್ನ್ ನಟಿಯರಿಗೆ ಹೆಚ್ಚಿನ ಫಾಲೋವರ್ಸ್ ಇದ್ದಾರೆ ಎಂಬುದು ಆಶ್ಚರ್ಯದ ವಿಚಾರವೇನಲ್ಲ. ಬಿಕಿನಿ, ಚಿಕ್ಕ ಚಿಕ್ಕ ಬಟ್ಟೆಯಲ್ಲಿ ಭರ್ಜರಿ ಫೋಸ್ ನೀಡುವ ನಟಿಯರನ್ನು ಹುಡುಗ್ರು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋ ಮಾಡ್ತಾರೆ. ಇದಕ್ಕೆ ಸೋಫಿ ಉತ್ತಮ ಉದಾಹರಣೆ.

ಸೋಫಿ ಫಿಟ್ನೆಸ್ ಬಗ್ಗೆ ತರಬೇತಿ ನೀಡ್ತಾಳೆ. ಇದಕ್ಕಾಗಿ ಇನ್ಸ್ಟ್ರಾಗ್ರಾಮ್ ನಲ್ಲಿ ಅಕೌಂಟ್ ತೆರೆದಿದ್ದು ತನ್ನ ಫಾಲೋವರ್ಸ್ ಗೆ ಫಿಟ್ನೆಸ್ ಬಗ್ಗೆ ಮಾಹಿತಿ ನೀಡ್ತಾಳೆ. ಫಿಟ್ನೆಸ್ ಬಗ್ಗೆ ಮಾಹಿತಿ ನೀಡುವ ಮೊದಲು ತನ್ನ ಫಿಟ್ನೆಸ್ ಫೋಟೋವನ್ನು ಹಾಕ್ತಾಳೆ ಸೋಫಿ. ಇತ್ತೀಚಿಗೆ ಸೋಫಿ ಒಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾಳೆ. ಅದನ್ನು ಅಭಿಮಾನಿಗಳ ಮುಂದೆ ಹೇಳಿದ್ದಾಳೆ. ಆಕೆ ಅಭಿಪ್ರಾಯ ಕೇಳಿದ ತಕ್ಷಣ 70 ಸಾವಿರ ಫಾಲೋವರ್ಸ್ ಅನ್ ಫಾಲೋ ಮಾಡಿದ್ದಾರೆ.

ನನ್ನ ಫಿಟ್ನೆಸ್ ಬಗ್ಗೆ ನಾನೇ ಹೇಳಿ ಹೇಳಿ ಸುಸ್ತಾಗಿದ್ದೇನೆ. ಹಾಗಾಗಿ ಇನ್ಮುಂದೆ ಬಿಕಿನಿ ತೊಟ್ಟು ಫಿಟ್ನೆಸ್ ತರಬೇತಿ ನೀಡಲ್ಲ ಎಂದಿದ್ದಾಳೆ ಸೋಫಿ. ಇಷ್ಟೇ ಸೋಫಿ ಈ ಅಭಿಪ್ರಾಯ ಕೇಳಿದ 70 ಸಾವಿರ ಮಂದಿ ಅನ್ ಫಾಲೋ ಮಾಡಲು ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...