alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ತ್ಯಾಜ್ಯ ಪ್ಲಾಸ್ಟಿಕ್‌ನಿಂದ ಓಡಲಿದೆ ಕಾರು…!

ವಿಜ್ಞಾನಿಗಳು ತ್ಯಾಜ್ಯ ಪ್ಲಾಸ್ಟಿಕ್ ಅನ್ನು ಜಲಜನಕ ಇಂಧನವಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದು, ಇದನ್ನು ಬಳಸಿ ಕಾರುಗಳನ್ನು ಓಡಿಸಲು ಸಾಧ್ಯವಾಗುವ ದಿನಗಳು ಶೀಘ್ರದಲ್ಲೇ ಬರಬಹುದು.

ಪ್ಲಾಸ್ಟಿಕ್ ಅನ್ನು ಆಲ್ಕಲೈನ್ ದ್ರಾವಣದಲ್ಲಿ ಹಾಕುವ ಮುನ್ನ ಅದಕ್ಕೆ ಬೆಳಕನ್ನು ಹೀರುವ ದ್ರವ್ಯವನ್ನು ಸೇರಿಸಲಾಯಿತು. ಇದಾದ ಬಳಿಕ ಸೂರ್ಯನ ಬೆಳಕಿಗೆ ಒಡ್ಡಲಾಯಿತು, ಇದು ಜಲಜನಕವನ್ನು ಸೃಷ್ಟಿಸಿತು ಎಂದು ಬ್ರಿಟನ್‌ನ ಸ್ವಾನ್‌ಸೀ ಯೂನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ.

ಈ ಪ್ರಕ್ರಿಯೆಯು ಪ್ಲಾಸ್ಟಿಕ್ ಅನ್ನು ರಿಸೈಕ್ಲಿಂಗ್ ಮಾಡುವುದಕ್ಕಿಂತ ಅಗ್ಗವಾಗಲಿದೆ. ಏಕೆಂದರೆ, ಯಾವುದೇ ರೀತಿಯ ಪ್ಲಾಸ್ಟಿಕ್ ಅನ್ನು ಇದರಲ್ಲಿ ಉಪಯೋಗಿಸಬಹುದು. ಅಲ್ಲದೆ ಸ್ವಚ್ಛಗೊಳಿಸಬೇಕಾಗಿಯೂ ಇಲ್ಲ ಎಂದು ಅವರು ಹೇಳಿದ್ದಾರೆ.

“ಪ್ರತಿವರ್ಷ ಬಿಲಿಯನ್‌ಗಟ್ಟಲೆ ಟನ್‌ ಪ್ಲಾಸ್ಟಿಕ್ ಬಳಸಲಾಗುತ್ತಿದೆ ಹಾಗೂ ಅದರಲ್ಲಿ ಸ್ವಲ್ಪ ಭಾಗವನ್ನಷ್ಟೇ ರೀ ಸೈಕಲ್ ಮಾಡಲಾಗುತ್ತಿದೆ. ರೀ ಸೈಕಲ್ ಆಗದೆ ಉಳಿದ ಪ್ಲಾಸ್ಟಿಕ್ ಅನ್ನು ಬಳಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಜಲಜನಕ ಉತ್ಪಾದನೆ ಪ್ರೊಜೆಕ್ಟ್ ಅನ್ನು ಔದ್ಯಮಿಕ ಮಟ್ಟದಲ್ಲಿ ನಡೆಸಲು ಇನ್ನೂ ಒಂದು ವರ್ಷ ಬೇಕಾಗಬಹುದು ” ಎಂದು ಸ್ವಾನ್‌ಸೀ ಯೂನಿವರ್ಸಿಟಿಯ ಮೋರಿಟ್ಝ್ ಕುನ್ಹೆಲ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...