alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಸೈಟ್ ಕುರಿತು ಮಾಹಿತಿ ನೀಡಿದ್ರೆ ಸಿಗುತ್ತೆ ಭಾರೀ ಬಹುಮಾನ

ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಮೊದಲಿನಿಂದಲೂ ಹದ್ದಿನ ಕಣ್ಣಿಟ್ಟಿರುವ ಚೀನಾದ ಕಮ್ಯೂನಿಸ್ಟ್ ಸರ್ಕಾರ ಇದೀಗ ಪೋರ್ನ್ ಪಬ್ಲಿಕೇಶನ್ ಗಳ ವಿರುದ್ಧ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದೆ.

ಈ ಹಿಂದೆ ಪೊರ್ನೋಗ್ರಾಫಿಕ್ ಮತ್ತು ಅಕ್ರಮ ಪಬ್ಲಿಕೇಶನ್ ಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದಲ್ಲಿ ಕೊಡಮಾಡುತ್ತಿದ್ದ ಬಹುಮಾನದ ಮೊತ್ತವನ್ನು ಇದೀಗ ದ್ವಿಗುಣಗೊಳಿಸಲಾಗಿದ್ದು ಡಿಸೆಂಬರ್ ಒಂದರಿಂದ ಜಾರಿಯಾಗಲಿದೆ.

ಈ ಹಿಂದೆ ಈ ಬಗ್ಗೆ ಮಾಹಿತಿ ನೀಡಿದರೆ 3 ಲಕ್ಷ ಯುವಾನ್ (ಸುಮಾರು 30.5 ಲಕ್ಷ ರೂ.) ನೀಡಲಾಗುತ್ತಿತ್ತು. ಡಿಸೆಂಬರ್ ಒಂದರಿಂದ ಈ ಮೊತ್ತ 6 ಲಕ್ಷ ಯುವಾನ್ (ಸುಮಾರು 61 ಲಕ್ಷ ರೂ.) ಆಗಲಿದೆ ಎಂದು ಚೀನಾ ಸರ್ಕಾರದ ಮೂಲಗಳು ತಿಳಿಸಿವೆ.

ದೇಶದ ಏಕತೆಗೆ ಧಕ್ಕೆಯುಂಟು ಮಾಡುವ, ದೇಶದ ರಹಸ್ಯಗಳನ್ನು ಬಯಲು ಮಾಡುವ, ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿ ಮಾಡುವ ಯಾವುದೇ ಪ್ರಕಟಣೆಯೂ ಶಿಕ್ಷಾರ್ಹ ಎಂದಿರುವ ಸರ್ಕಾರ, ಈ ಪ್ರಕಾರ ಸೈಬರ್ ಅವಾಂತರಗಳನ್ನೂ ಇದೇ ರೀತಿಯಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿದೆ.

ಈ ವಾರದಲ್ಲಿ ಸೈಬರ್ ಸ್ಪೇಸ್ ಎಡ್ಮಿನಿಸ್ಟ್ರೇಶನ್ ಆಫ್ ಚೈನಾ(ಸಿಎಸಿ) ಚ್ಯಾಟ್ ಗ್ರೂಪ್ ಗಳು, ಬ್ಲಾಗ್ ಗಳು, ಟ್ವಿಟರ್ ಮುಂತಾದವುಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿತ್ತು. ಮಾತ್ರವಲ್ಲ, ರಾಜಕೀಯವಾಗಿ ಹಾನಿಯನ್ನುಂಟುತ್ತಿವೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿನ 9800 ಕ್ಕೂ ಅಧಿಕ ಖಾತೆಗಳನ್ನು ನಿಷ್ಕ್ರಿಯಗೊಳಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...