alex Certify
ಕನ್ನಡ ದುನಿಯಾ       Mobile App
       

Kannada Duniya

ಸೋನಿ ಪಿಕ್ಚರ್ಸ್ ಸಂಸ್ಥೆ ಮಾಡಿದೆ ದೊಡ್ಡ ಯಡವಟ್ಟು

ಸೋನಿ ಪಿಕ್ಚರ್ಸ್ ಸಂಸ್ಥೆ ಯಡವಟ್ಟು ಮಾಡಿದೆ. ‘ಖಾಲಿ ದಿ ಕಿಲ್ಲರ್​​’ ಚಿತ್ರ ಟ್ರೈಲರ್​ ಹಾಕುವುದರ ಬದಲು ಚಿತ್ರವನ್ನೇ ಯೂಟ್ಯೂಬ್​​ನಲ್ಲಿ ಅಪ್​ ಲೋಡ್​ ಮಾಡಿದೆ.

ವರದಿಯ ಪ್ರಕಾರ ನಿರ್ಮಾಣ ಸಂಸ್ಥೆ ಜುಲೈ 3ರಂದು 89 ನಿಮಿಷ ಹಾಗೂ 46 ಸೆಕೆಂಡ್​​ಗಳ ಚಿತ್ರವನ್ನು, ಯೂಟ್ಯೂಬ್​​ನಲ್ಲಿ ಅಪ್​ಲೋಡ್ ಮಾಡಿತ್ತು. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ಸೋನಿ ಸಂಸ್ಥೆಗೆ, ತಾನು ಮಾಡಿದ ತಪ್ಪಿನ ಅರಿವಾಗಿದೆ.

ಹೀಗಾಗಿ ಯೂಟ್ಯೂಬ್​​ನಿಂದ ಚಿತ್ರವನ್ನು ತೆಗೆದು ಹಾಕಿದೆ. ಇನ್ನು ಎಂಟು ಗಂಟೆ ಯೂಟ್ಯೂಬ್​​ನಲ್ಲಿ ಸದ್ದು ಮಾಡಿದ್ದ ಚಿತ್ರ, ಹಲವು ಅಭಿಮಾನಿಗಳನ್ನು ಆಕರ್ಷಿಸಿದೆ. ಅಲ್ಲದೆ ಸೋನಿ ಮಾಡಿದ ತಪ್ಪನ್ನು ಟ್ವೀಟರ್​ ಖಾತೆಯಲ್ಲಿ ಅಭಿಮಾನಿಗಳು ಪೋಸ್ಟ್​ ಸಹ ಮಾಡಿದ್ದಾರೆ.

ಬಹುನೀರಿಕ್ಷಿತ ಚಿತ್ರಗಳಲ್ಲಿ ಒಂದಾದ ‘ಖಾಲಿ ದಿ ಕಿಲ್ಲರ್’​ ಚಿತ್ರವನ್ನು ಮ್ಯಾಥ್ಯೂಸ್​​ ನಿರ್ದೇಶನ ಮಾಡಿದ್ದು, ರಿಚರ್ಡ್​​​ ಕಾಬ್ರಲ್​​ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...