alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ಮಗನಿಗೆ ಕ್ಯಾನ್ಸರ್ ಸುದ್ದಿ ಹೇಳಿದ್ರು ಸೋನಾಲಿ ಬೇಂದ್ರೆ

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಹೈ ಗ್ರೇಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಸೋನಾಲಿ ಬೇಂದ್ರೆ ಈ ವಿಚಾರವನ್ನು ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ. ಸೋನಾಲಿ ಕೆಲ ದಿನಗಳ ಹಿಂದಷ್ಟೇ ಕೂದಲು ಕತ್ತರಿಸಿಕೊಂಡಿದ್ದ ಫೋಟೋ ಫೋಸ್ಟ್ ಮಾಡಿದ್ದರು. ಈಗ ಮಗನ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ.

ಫೋಟೋ ಜೊತೆಗೆ ಭಾವನಾತ್ಮಕ ಸಂದೇಶವನ್ನು ಬರೆದಿದ್ದಾರೆ. 12 ವರ್ಷ, 11 ತಿಂಗಳು, 8 ದಿನಗಳ ಹಿಂದೆ ನೀನು ಜನಿಸಿದೆ. ನೀನು ಹುಟ್ಟಿದ ಕ್ಷಣದಿಂದ ಇಲ್ಲಿಯವರೆಗೆ ನೀನೇ ನಮ್ಮ ಸರ್ವಸ್ವ. ಮಗನ ಖುಷಿ, ಸಂತೋಷವೇ ನಮಗೆಲ್ಲ. ಕ್ಯಾನ್ಸರ್ ಬಗ್ಗೆ ಮಗನಿಗೆ ಹೇಗೆ ಹೇಳುವುದು ಎಂಬ ಚಿಂತೆ ಕಾಡಿತ್ತು ಎಂದು ಬರೆದಿದ್ದಾರೆ ಸೋನಾಲಿ.

ಮಗನಿಗೆ ಈವರೆಗೆ ಎಲ್ಲ ವಿಷ್ಯವನ್ನೂ ಹೇಳುತ್ತ ಬಂದಿದ್ದೇವೆ. ಮಗನಿಗೆ ಎಂದೂ ಸುಳ್ಳು ಹೇಳಿಲ್ಲ. ಕ್ಯಾನ್ಸರ್ ಇರುವ ವಿಚಾರ ಹೇಳುವುದು ಅನಿವಾರ್ಯವಾಗಿತ್ತು. ಮಗ ಇದನ್ನು ಹೇಗೆ ಸ್ವೀಕರಿಸುತ್ತಾನೆಂಬ ಭಯವಿತ್ತು. ಆದ್ರೆ ಮಗ ಗಂಭೀರವಾಗಿ ಈ ವಿಷ್ಯವನ್ನು ಸ್ವೀಕರಿಸಿದ್ದಾನೆ. ನನಗೆ ಹೋರಾಡುವ ಧೈರ್ಯ ತುಂಬುತ್ತಾನೆ. ಕೆಲವೊಮ್ಮೆ ನನ್ನ ಪಾಲಕರಂತೆ ಆತ ವರ್ತಿಸುತ್ತಾನೆ. ನ್ಯೂಯಾರ್ಕ್ ನಲ್ಲಿ ರಜೆ ಕಳೆಯುತ್ತಿರುವ ಆತನ ತುಂಟಾಟ ಹಾಗೂ ಸಕಾರಾತ್ಮಕ ಚಿಂತನೆ ನನಗೆ ಹೋರಾಡುವ ಧೈರ್ಯ, ಉತ್ಸಾಹ ನೀಡುತ್ತದೆ ಎಂದು ಸೋನಾಲಿ ಬೇಂದ್ರೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...