alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕ ಸಲಹೆ ಮೇರೆಗೆ ಈ ಸ್ಟೈಲ್ ಬದಲಿಸಿದ್ರು ಕ್ಯಾನ್ಸರ್ ಪೀಡಿತ ಸೋನಾಲಿ

ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಈ ವಿಷ್ಯ ಎಲ್ಲರಿಗೂ ಗೊತ್ತು. ನ್ಯೂಯಾರ್ಕ್ ನಲ್ಲಿ ಸೋನಾಲಿಗೆ ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಸೋನಾಲಿ ಹೊಸ ಹೇರ್ ಸ್ಟೈಲ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾಗೆ ಧನ್ಯವಾದ ಹೇಳಿದ್ದಾರೆ.

ಸೋನಾಲಿ ಬೇಂದ್ರೆಗೆ ಕಿಮೋಥೆರಪಿ ನಡೆಯುತ್ತಿದೆ. ಕಿಮೋಥೆರಪಿಗೂ ಮುನ್ನ ಸೋನಾಲಿ ಕೂದಲು ಕತ್ತರಿಸಿಕೊಂಡಿದ್ಲು. ಆಗ ಕೂಡ ಸೋನಾಲಿ ಫೋಟೋ ಹಾಕಿದ್ರು. ಈಗ ಮತ್ತೊಂದಿಷ್ಟು ಫೋಟೋ ಹಾಕಿದ್ದಾರೆ. ಅದ್ರಲ್ಲಿ ಸೋನಾಲಿ ಸುಂದರ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ.

ಸೋನಾಲಿ ಈ ಹೇರ್ ಸ್ಟೈಲ್ ರಿಯಲ್ ಅಲ್ಲ ರೀಲ್. ಅಂದ್ರೆ ಸೋನಾಲಿ ವಿಗ್ ಬಳಸುತ್ತಿದ್ದಾರೆ. ಇದನ್ನು ಎಲ್ಲರ ಮುಂದೆ ಹೇಳಿರುವ ಸೋನಾಲಿ, ವಿಗ್ ಬಳಸಲು ಸಲಹೆ ನೀಡಿದ ಪ್ರಿಯಾಂಕ ಚೋಪ್ರಾಗೆ ಧನ್ಯವಾದ ಹೇಳಿದ್ದಾರೆ. ಸುಂದರವಾಗಿ ಕಾಣಬೇಕು ಎನ್ನೋದು ಎಲ್ಲರ ಆಸೆ. ಅದಕ್ಕಾಗಿ ಸ್ವಲ್ಪ ಹೆಚ್ಚು ಮಾಡಿದ್ರೆ ತಪ್ಪೇನಿಲ್ಲ. ಸುಂದರವಾಗಿ ಕಾಣಲು ವಿಗ್ ಇಲ್ಲ ಲಿಪ್ಸ್ಟಿಕ್. ನಿಮಗಿಷ್ಟವಾಗುವಂತೆ ಮಾಡಿ ಎಂದು ಸೋನಾಲಿ ಪೋಸ್ಟ್ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...