alex Certify
ಕನ್ನಡ ದುನಿಯಾ       Mobile App
       

Kannada Duniya

60 ಲಕ್ಷದ ಬಿಎಂಡಬ್ಲು ಕಾರಿನಲ್ಲಿ ತಂದೆ ದಫನ್ ಮಾಡಿದ ಮಗ

ನೈಜೀರಿಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ ತಂದೆ ಅಂತ್ಯ ಸಂಸ್ಕಾರ ಸುದ್ದಿಯಲ್ಲಿದೆ. ಶವಪೆಟ್ಟಿಗೆ ಬದಲು ಐಷಾರಾಮಿ ಬಿಎಂಡಬ್ಲು ಕಾರಿನಲ್ಲಿ ತಂದೆ ಶವವಿಟ್ಟು ಮಣ್ಣಿನಲ್ಲಿ ಹೂಳಿದ್ದಾನೆ ಮಗ.

ಈ ವ್ಯಕ್ತಿಯ ಹೆಸರು ಅಜುಬುಕ್. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವ್ಯಕ್ತಿ ತನ್ನ ತಂದೆಗೆ ಐಷಾರಾಮಿ ಕಾರು ನೀಡುವುದಾಗಿ ಪ್ರಮಾಣ ಮಾಡಿದ್ದನಂತೆ. ಹಳ್ಳಿಯಲ್ಲಿದ್ದ ತಂದೆ ಸಾವನ್ನಪ್ಪಿರುವ ಸುದ್ದಿ ಮಗನಿಗೆ ಸಿಕ್ಕಿದೆ. ತಕ್ಷಣ ಕಾರ್ ಶೋ ರೂಮಿಗೆ ಹೋದ ಮಗ 60 ಲಕ್ಷದ ಕಾರನ್ನು ಖರೀದಿ ಮಾಡಿದ್ದಾನೆ.

ಸುಮಾರು 6 ಅಡಿಗಳಷ್ಟು ಹೊಂಡ ತೋಡಿ ಅದ್ರಲ್ಲಿ ಬಿಎಂಡಬ್ಲು ಕಾರ್ ಇಳಿಸಿದ್ದಾನೆ. ಕಾರಿನಲ್ಲಿ ತಂದೆ ಶವ ತುಂಬಿ ಮಣ್ಣು ಮುಚ್ಚಿದ್ದಾನೆ. ಬದುಕಿದ್ದಾಗ ತಂದೆಗೆ ಕಾರು ಕೊಡಿಸಲು ಸಾಧ್ಯವಾಗಲಿಲ್ಲ. ಈಗಲಾದ್ರೂ ಗೌರವಪೂರ್ವಕವಾಗಿ ವಿದಾಯ ಹೇಳ್ತೇನೆಂದು ಮಗ ಹೇಳಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಈತನ ವರ್ತನೆಗೆ ವಿರೋಧ ವ್ಯಕ್ತವಾಗಿದೆ. ಇದ್ರಿಂದ ದುಂದು ವೆಚ್ಚವಾಗ್ತಿದೆ. ತಂದೆ-ತಾಯಿ ಬದುಕಿರುವಾಗ ಹಣವಿದ್ರೆ ಅವ್ರಿಗಾಗಿ ಕಾರು ಖರೀದಿ ಮಾಡಿ. ಸತ್ತ ಮೇಲೆ ಶವಪೆಟ್ಟಿಗೆಯಲ್ಲಿಯೇ ಮಣ್ಣು ಮಾಡಿ ಎಂದು ಅನೇಕರು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...