alex Certify
ಕನ್ನಡ ದುನಿಯಾ       Mobile App
       

Kannada Duniya

ಟಾಯ್ಲೆಟ್ ಕ್ಲೀನ್‍ ಮಾಡುವ ‘ಟ್ರಂಪ್’ ಗೆ ಫುಲ್ ಡಿಮ್ಯಾಂಡ್

ಅಮೆರಿಕಾದ ಅಧ್ಯಕ್ಷರನ್ನು ಈಗ ಹಲವರು ಟಾಯ್ಲೆಟ್ ಕ್ಲೀನ್‍ ಗೂ ಬಳಸುತ್ತಿದ್ದಾರೆ. ಅಂದರೆ ಇದೀಗ ಟಾಯ್ಲೆಟ್ ಕ್ಲೀನ್‍ ಗೆ ಟ್ರಂಪ್ ಬ್ರಷ್ ಮಾರುಕಟ್ಟೆಯಲ್ಲಿದೆ. ಆ ಮೂಲಕ ಟ್ರಂಪ್ ಕಾಲೆಳೆಯುವ ಪ್ರಯತ್ನ ಮತ್ತೆ ಜಾರಿಯಲ್ಲಿದೆ.

ಟ್ರಂಪ್ ಮುಖ ಹೋಲುವ ಆಕೃತಿ, ತಲೆಗೆ ಬ್ರಿಸಲ್ಸ್, ಕುತ್ತಿಗೆಯಿಂದ ಮುಂದುವರಿದ ಹ್ಯಾಂಡಲ್ ಇರುವ ಟಾಯ್ಲೆಟ್ ಬ್ರಷ್ ಮಾರುಕಟ್ಟೆಯಲ್ಲಿದೆ. “ಮೇಕ್ ಯುವರ್ ಟಾಯ್ಲೆಟ್ ಗ್ರೇಟ್ ಅಗೇನ್. ನೋ ಪ್ರೆಸಿಡೆಂಟ್ ಹ್ಯಾಸ್ ಹ್ಯಾಡ್ ಎ ಟಾಯ್ಲೆಟ್ ಬ್ರಷ್ ಲೈಕ್ ಮೈ ಟಾಯ್ಲೆಟ್ ಬ್ರಷ್….” ಮುಂತಾದ ಘೋಷವಾಕ್ಯಗಳೊಂದಿಗೆ ಈ ಬ್ರಷ್‍ ಅನ್ನು ಮಾರಾಟ ಮಾಡಲಾಗುತ್ತಿದೆ.

ಇಟಿಎಸ್‍ವೈ.ಕಾಮ್ ವೆಬ್‍ ಸೈಟ್‍ನಲ್ಲಿ ಇದು ಲಭ್ಯವಿದ್ದು, ನ್ಯೂಜಿಲ್ಯಾಂಡ್‍ನಿಂದ ಇದು ಪೂರೈಕೆ ಆಗುತ್ತಿದೆ.

ಇದಕ್ಕೀಗ ಎಷ್ಟು ಬೇಡಿಕೆ ಇದೆಯೆಂದರೆ ಗ್ರಾಹಕರು ಇದನ್ನು ಪಡೆಯಲು ಆರರಿಂದ ಎಂಟು ವಾರಗಳ ಕಾಲ ಕಾಯಬೇಕಾಗುತ್ತಿದೆಯಂತೆ. ಈ ಹಿಂದೆ ಟ್ರಂಪ್ ಮೂರ್ತಿಯನ್ನು ಮಾಡಿ ಇಲ್ಲಿ ಮೂತ್ರ ಮಾಡಿ ಎಂದು ಬರೆಯಲಾಗಿತ್ತು. ಇದೀಗ ಟಾಯ್ಲೆಟ್ ಬ್ರಷ್ ಮೂಲಕ ಟ್ರಂಪ್ ಕುರಿತು ಅಸಹನೆ ವ್ಯಕ್ತಪಡಿಸುವ ಪ್ರಯತ್ನಗಳು ನಡೆಯುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...