alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಕಾಕಾರರಿಗೆ ಉತ್ತರ ನೀಡಿ ಮನಗೆದ್ದ ಹುಡುಗ

download-1

ನಿಜವಾದ ಪ್ರೀತಿಗೆ ಆಂತರಿಕ ಸೌಂದರ್ಯ ಮುಖ್ಯವೇ ಹೊರತು ಬಾಹ್ಯ ಸೌಂದರ್ಯವಲ್ಲ. ನಿಜವಾಗಿ ಪ್ರೀತಿ ಮಾಡುವವರು ಹೃದಯ, ಮನಸ್ಸು ನೋಡಿ ಪ್ರೀತಿ ಮಾಡ್ತಾರೆ. ಸೌಂದರ್ಯ ನೋಡಿ ಮಾಡುವ ಪ್ರೀತಿ ಕ್ಷಣಿಕ. ಇದಕ್ಕೆ ಟ್ವೀಟರ್ ನಲ್ಲಿ ವೈರಲ್ ಆಗಿರುವ ಫೋಟೋ ಉತ್ತಮ ಉದಾಹರಣೆ.

ಟ್ವೀಟರ್ ನಲ್ಲಿ ಬೂಕರ್ ಎಂಬ ವ್ಯಕ್ತಿ ಗರ್ಲ್ ಫ್ರೆಂಡ್ ಜೊತೆಗಿರುವ ಕೆಲ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾನೆ. ಬೂಕರ್ ಗರ್ಲ್ ಫ್ರೆಂಡ್ ತುಂಬಾ ದಪ್ಪಗಿದ್ದಾಳೆ. ಇದೇ ವಿಷಯವನ್ನಿಟ್ಟುಕೊಂಡು ಅನೇಕರು ಬೂಕರ್ ಫೋಟೋಕ್ಕೆ ಕಮೆಂಟ್ ಮಾಡಿದ್ದಾರೆ. ಗರ್ಲ್ ಫ್ರೆಂಡ್ ತುಂಬಾ ದಪ್ಪಗಿದ್ದಾಳೆ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ದಪ್ಪಗಿದ್ದರೂ ನಿನ್ನನ್ನು ನಿನ್ನ ಬಾಯ್ ಫ್ರೆಂಡ್ ಇಷ್ಟು ಇಷ್ಟಪಡ್ತಾನೆ ಎಂದು ಕಮೆಂಟ್ ಮಾಡಿದ್ದಾರೆ.

ಇದಕ್ಕೆ ಹುಡುಗಿ ಬೇಸರ ವ್ಯಕ್ತಪಡಿಸಿದ್ದಾಳೆ. ಆದ್ರೆ ಬೂಕರ್ ಮಾತ್ರ ಟ್ವೀಟರ್ ಮೂಲಕವೇ ಸರಿಯಾದ ಉತ್ತರ ನೀಡಿದ್ದಾನೆ. ಬೇಬಿ ನೀನು ದಪ್ಪಗಿಲ್ಲ. ದೇವರು ನನಗಾಗಿ ನಿನ್ನನ್ನು ಕೊಟ್ಟಿದ್ದಾನೆ. ನೀನು ನನಗೆ ಸರಿಯಾದ ಜೋಡಿ ಎಂದು ಟ್ವಿಟ್ ಮಾಡುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...