alex Certify
ಕನ್ನಡ ದುನಿಯಾ       Mobile App
       

Kannada Duniya

1.13 ಕೋಟಿಗೆ ಮಾರಾಟವಾದ ಈ ಏಣಿ ವಿಶೇಷವೇನು ಗೊತ್ತಾ?

ತಮಗಿಷ್ಟವಾಗುವ ವಸ್ತುಗಳನ್ನು ಖರೀದಿ ಮಾಡಲು ಜನರು ಎಷ್ಟು ಹಣ ಬೇಕಾದ್ರೂ ನೀಡ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಈ ವ್ಯಕ್ತಿ. ಲಕ್ಷಾಂತರ ರೂಪಾಯಿ ಹೊಂದಿಸಿ ಸಣ್ಣ ಕಾರು ಖರೀದಿಗೆ ಜೀವನ ಪರ್ಯಂತ ಬೆವರು ಸುರಿಸಿ ದುಡಿಯುವವರು ನಮ್ಮಲ್ಲಿದ್ದಾರೆ. ಆದ್ರೆ ಈ ವ್ಯಕ್ತಿ ಕೇವಲ ಏಣಿಯೊಂದರಕ್ಕೆ 1.13 ಕೋಟಿ ರೂಪಾಯಿ ನೀಡಿದ್ದಾನೆ.

ಈ ಏಣಿಯಲ್ಲಿ ಅಂತಹದ್ದೇನು ವಿಶೇಷವಿದೆ ಗೊತ್ತಾ? ಈ ಏಣಿಯನ್ನು ಹಿಂದೆ ಐಫೆಲ್ ಟವರ್ ನಲ್ಲಿ ಬಳಸಲಾಗುತ್ತಿತ್ತು. ಈಗ ಅಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಹಾಗಾಗಿ ಏಣಿಯನ್ನು ಹರಾಜಿಗೆ ಇಡಲಾಗಿತ್ತು. ಹರಾಜಿನಲ್ಲಿ ಏಣಿ 31 ರಿಂದ 47 ಲಕ್ಷದೊಳಗೆ ಮಾರಾಟವಾಗಬಹುದೆಂದು ಅಂದಾಜಿಸಲಾಗಿತ್ತು.

ಹರಾಜಿನಲ್ಲಿ ಏಣಿ 1 ಕೋಟಿ 32 ಲಕ್ಷದ 850 ರೂಪಾಯಿಗೆ ಮಾರಾಟವಾಗಿದೆ. ಹಾಗಂತ ಅತ್ಯಂತ ದುಬಾರಿ ಏಣಿ ಇದಲ್ಲ. ಯಾಕೆಂದ್ರೆ 2016 ರಲ್ಲಿ ಶ್ರೀಮಂತರೊಬ್ಬರು ಏಣಿಯನ್ನು 4 ಕೋಟಿ 16 ಲಕ್ಷಕ್ಕೆ ಖರೀದಿ ಮಾಡಿದ್ದರು. ಈಗ ಮಾರಾಟವಾದ ಏಣಿ 4.3 ಮೀಟರ್ ಎತ್ತರವಿದೆ. 1983 ರಲ್ಲಿ ಏಣಿ ಬದಲು ಐಫೆಲ್ ಟವರ್ ಗೆ ಲಿಫ್ಟ್ ಅಳವಡಿಸಲಾಗಿತ್ತು. ನಂತ್ರ ಮೆಟ್ಟಿಲುಗಳನ್ನು 24 ತುಂಡುಗಳಾಗಿ ವಿಂಗಡನೆ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...