alex Certify
ಕನ್ನಡ ದುನಿಯಾ       Mobile App
       

Kannada Duniya

ಸುದ್ದಿಯನ್ನು ತಿದ್ದಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಭೂಪ

social media

ಸಾಮಾಜಿಕ ಜಾಲತಾಣದಲ್ಲಿ ಹೇಗೆಲ್ಲಾ ವಿಕೃತಿಗಳು ನಡೆಯುತ್ತವೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಚೀನಾದಲ್ಲಿ ಒಂದೇ ಮಗು ನಿಯಮ ಜಾರಿಗೆ ಬಂದ ಹಲವು ದಶಕದ ಬಳಿಕ ಅದನ್ನು ಬದಲಿಸಿ ಇಬ್ಬರು ಮಕ್ಕಳನ್ನು ಹೊಂದುವ ಕಾನೂನು ಜಾರಿಗೆ ತರಲಾಗಿತ್ತು.

ಹೀಗೆ ಚೀನಾದಲ್ಲಿ ಇಬ್ಬರು ಮಕ್ಕಳನ್ನು ಹೊಂದುವ ಕಾನೂನನ್ನು ಜಾರಿಗೆ ತಂದಿರುವುದನ್ನು ಪತ್ರಿಕೆಯೊಂದರಲ್ಲಿ ಪ್ರಕಟಿಸಿದ್ದು, ಈ ಪತ್ರಿಕೆಯ ಸುದ್ದಿಯ ತುಣುಕನ್ನು ತಿದ್ದಿದ ಭೂಪನೊಬ್ಬ ಇಬ್ಬರು ಮಕ್ಕಳು ಬದಲಿಗೆ, ಇಬ್ಬರು ಪತ್ನಿಯರನ್ನು ಹೊಂದುವ ಕಾನೂನು ಜಾರಿಗೆ ತರಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಚೀನಾದಲ್ಲಿ ಒಂದೇ ಮಗು ನೀತಿಯಿಂದ ವಯಸ್ಸಾದವರ ಸಂಖ್ಯೆ ಜಾಸ್ತಿಯಾದ ಕಾರಣಕ್ಕೆ ಇಬ್ಬರು ಮಕ್ಕಳನ್ನು ಹೊಂದುವ ಕಾನೂನು ಜಾರಿಗೆ ತಂದಿದ್ದನ್ನು ‘ಯಾಂಗ್ ಜಿಯಾಂಗ್’ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು.

ಈ ಸುದ್ದಿಯ ಶೀರ್ಷಿಕೆ ಬದಲಿಸಿದ ಲಿನ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದರಿಂದ ಸರ್ಕಾರದ ಕಾನೂನು ಬಗ್ಗೆ ತಪ್ಪು ಸಂದೇಶ ನೀಡಿದಂತಾಗಿದೆ ಎಂದು ಪತ್ರಿಕೆಯ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಇದರ ಅನ್ವಯ ಆರೋಪಿ ಲಿನ್ ನನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...