alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣ ಬಳಸುವ ಹುಡುಗಿಯರು ಓದಲೇಬೇಕಾದ ಸುದ್ದಿ

ಸಾಮಾಜಿಕ ಜಾಲತಾಣಗಳು ಯುವ ಪೀಳಿಗೆಗೆ ಹುಚ್ಚು ಹಿಡಿಸಿವೆ. ಫೇಸ್ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಮ್ ಇಲ್ಲದೆ ಜೀವನವೇ ಇಲ್ಲ ಎಂಬ ಸ್ಥಿತಿಗೆ ತಲುಪಿದ್ದಾರೆ ಹಲವರು. ದಿನವಿಡೀ ಕೆಲವರು ಸೋಶಿಯಲ್ ಮೀಡಿಯಾ ಬ್ರೌಸ್ ಮಾಡುತ್ತ ಸಮಯ ವ್ಯರ್ಥ ಮಾಡ್ತಿದ್ದಾರೆ.

ಯೂನಿವರ್ಸಿಟಿ ಆಫ್ ಎಸ್ಸೆಕ್ಸ್ ನಡೆಸಿದ ಸಂಶೋಧನೆಯ ಪ್ರಕಾರ ಸಾಮಾಜಿಕ ಜಾಲತಾಣಗಳು ಹದಿಹರೆಯದ ಹುಡುಗರಿಗಿಂತ ಹೆಚ್ಚಾಗಿ ಹೆಣ್ಣುಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿವೆ. ಹುಡುಗರಿಗಿಂತಲೂ ಹೆಚ್ಚಾಗಿ ಹುಡುಗಿಯರೇ ಸಾಮಾಜಿಕ ತಾಣಗಳನ್ನು ಬಳಸುತ್ತಿದ್ದಾರೆ.

13 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಕಡಿಮೆ ಅಂದ್ರೂ ದಿನಕ್ಕೆ 1 ಗಂಟೆಗಿಂತ ಹೆಚ್ಚು ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿದ್ದಾರೆ. ಶೇ.59ರಷ್ಟು ಹುಡುಗಿಯರು ಜಾಲತಾಣಗಳಲ್ಲಿ ಸಂವಹನ ನಡೆಸಿದ್ರೆ, ಶೇ.46ರಷ್ಟು ಹುಡುಗರು ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರಿಯರಾಗಿದ್ದಾರೆ.

ಹುಡುಗರಿಗಿಂತ್ಲೂ ಹೆಚ್ಚಾಗಿ ಹೆಣ್ಣುಮಕ್ಕಳ ಆರೋಗ್ಯ ಹಾಗೂ ಸಂತೋಷವನ್ನು ಸೋಶಿಯಲ್ ಮೀಡಿಯಾ ಹಾಳುಮಾಡುತ್ತಿದೆ. 9859 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿ ಸಂಶೋಧಕರು ಈ ವರದಿ ತಯಾರಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...