alex Certify
ಕನ್ನಡ ದುನಿಯಾ       Mobile App
       

Kannada Duniya

ಸೀಲಿಂಗ್ ಗೆ ಜೋತು ಬಿದ್ದಿದ್ದ ಜೋಡಿ ಹಾವುಗಳನ್ನು ಕಂಡವನಿಗೆ ಶಾಕ್

snake-75934ವ್ಯಕ್ತಿಯೊಬ್ಬ ತನ್ನ ಕೆಲಸ ಮುಗಿಸಿಕೊಂಡು ಮನೆಗೆ ತೆರಳಿದ ವೇಳೆ ಹಾಲ್ ನಲ್ಲಿ ಕಂಡು ಬಂದ ದೃಶ್ಯ ನೋಡಿ ಬೆಚ್ಚಿ ಬಿದ್ದಿದ್ದಾನೆ. ಸೀಲಿಂಗ್ ನಿಂದ ಜೋತು ಬಿದ್ದಿದ್ದ ಜೋಡಿ ಹಾವುಗಳು, ನಾಲಿಗೆ ಹೊರ ಚಾಚಿ ಆಟವಾಡುತ್ತಿದ್ದನ್ನು ಕಂಡವನು ಕ್ಷಣ ಕಾಲದ ನಂತರ ಸಾವರಿಸಿಕೊಂಡು ಆ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಅಮೆರಿಕಾದ ದಕ್ಷಿಣ ಕರೋಲಿನಾದ ಗ್ರೀನ್ ವುಡ್ ನಲ್ಲಿ ಈ ಘಟನೆ ನಡೆದಿದ್ದು, ಮಾರ್ಕ್ ಹಯಾತ್ ಎಂಬಾತನ ಮನೆಯಲ್ಲಿ ಈ ದೃಶ್ಯ ಕಂಡು ಬಂದಿದೆ. ಮನೆ ಪ್ರವೇಶಿಸುತ್ತಿದ್ದಂತೆಯೇ ಈ ದೃಶ್ಯ ಕಂಡ ಮಾರ್ಕ್ ಮೊದಲಿಗೆ ಬೆಚ್ಚಿ ಬಿದ್ದರೂ ನಂತರ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಆತ ಈ ವಿಡಿಯೋವನ್ನು ಶೇರ್ ಮಾಡಿದ್ದು, ಈಗಾಗಲೇ 13 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರಲ್ಲದೇ 14 ಸಾವಿರ ಮಂದಿ ಶೇರ್ ಮಾಡಿದ್ದಾರೆ. ಮನೆಯ ಸೀಲಿಂಗ್ ಗೆ ಈ ಹಾವುಗಳು ಹೇಗೆ ಹೋದವೆಂಬುದು ಕುತೂಹಲ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...