alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಕ್ಸಿಕೋ ವಿಮಾನದಲ್ಲಿ ನಾಗರಹಾವು ಪ್ರತ್ಯಕ್ಷ….

snake

ಹಾಲಿವುಡ್ ನ ‘ಸ್ನೇಕ್ ಆನ್ ಎ ಪ್ಲೇನ್’ ಚಿತ್ರ ನೋಡಿದ್ದೀರಾ? ಅಂಥದ್ದೇ ಭಯಾನಕ ಅನುಭವ ಮೆಕ್ಸಿಕೋದ ಪ್ರಯಾಣಿಕರಿಗೆ ನಿಜ ಜೀವನದಲ್ಲೂ ಆಗಿದೆ. ಭಾನುವಾರ ಏರೋ ಮೆಕ್ಸಿಕೋ ವಿಮಾನ ಟೊರಿಯೊನ್ ನಿಂದ ಮೆಕ್ಸಿಕೋ ಸಿಟಿಗೆ ಹೊರಟಿತ್ತು.

ವಿಮಾನದೊಳಕ್ಕೆ ಇದ್ದಕ್ಕಿದ್ದಂತೆ ಅದೇನೋ ಸದ್ದು, ಕುತೂಹಲದಿಂದ ನೋಡುತ್ತಿದ್ದವರೆಲ್ಲ ಬೆಚ್ಚಿ ಬಿದ್ದಿದ್ರು, ಯಾಕಂದ್ರೆ ಅಲ್ಲಿ ಭಾರೀ ಗಾತ್ರದ ಹಾವು ಪ್ರತ್ಯಕ್ಷವಾಗಿತ್ತು. ಲಗೇಜ್ ಕಂಪಾರ್ಟ್ ಮೆಂಟ್ ಬಳಿಯಿದ್ದ ಸೀಲಿಂಗ್ ಮೇಲೆ ನಾಗರಹಾವಿತ್ತು.

ಸುಮಾರು 1 ಮೀಟರ್ ಉದ್ದವಿದ್ದ ಹಾವನ್ನು ನೋಡಿ ಪ್ರಯಾಣಿಕರೆಲ್ಲ ಭಯದಿಂದ ಕಂಗಾಲಾಗಿದ್ರು. ಎಲ್ಲರೂ ಸೀಟಿನಿಂದ ಮೇಲೆದ್ದು ಫ್ಲೋರ್ ಮೇಲೆ ನಿಂತ್ರು, ಆತ್ಮರಕ್ಷಣೆಗಾಗಿ ಕೆಲವರಿಗೆ ಬ್ಲಾಂಕೆಟ್ ವಿತರಿಸಲಾಯ್ತು. 10 ನಿಮಿಷಗಳ ಬಳಿಕ ವಿಮಾನ ತುರ್ತು ಭೂಸ್ಪರ್ಷ ಮಾಡಿತು. ಪ್ರಯಾಣಿಕರನ್ನೆಲ್ಲ ಕೆಳಕ್ಕಿಳಿಸಲಾಯ್ತು. ಪ್ರಾಣಿ ನಿಯಂತ್ರಣ ಕಾರ್ಯಕರ್ತರು ಯಶಸ್ವಿಯಾಗಿ ಹಾವನ್ನು ಹಿಡಿದುಕೊಂಡು ಹೋದ್ರು. ಹಾವು ಕ್ಯಾಬಿನ್ ಒಳಕ್ಕೆ ಹೇಗೆ ಬಂತು ಅನ್ನೋದು ಮಾತ್ರ ನಿಗೂಢವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...